ಗ್ರಾಮ ಪಂಚಾಯತ್ ಅಧ್ಯಕ್ಷರ ಅಧಿಕಾರವನ್ನು ಸರಕಾರ ಮೊಟಕು ಗೊಳಿಸಿರುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗಲಿದೆ. ಜನರ ಸಮಸ್ಯೆಗಳಿ ತಕ್ಷಣ ಸ್ಪಂದಿಸುವವರು ಸ್ಥಳೀಯ ಜನಪ್ರತಿನಿಧಿಗಳು. ಅಧಿಕಾರ ಮೊಟಕುಗೊಳಿಸಿ ಜನಪ್ರತಿನಿಧಿಗಳ ಶಕ್ತಿ ಕುಂದಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ.
ಅವರು ಸುಳ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಾಮಗಾರಿ ಬಿಲ್ ಪಾವತಿಗೆ ಪಂಚಾಯತ್ ಅಧ್ಯಕ್ಷರ ಅಧಿಕಾರವನ್ನು ಕಿತ್ತು ಕೊಳ್ಳಲಾಗಿದೆ ಮತ್ತು ಅಧಿಕಾರವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ದ್ವಿತೀಯ ದರ್ಜೆ ಗುಮಾಸ್ತರಿಗೆ ನೀಡಲಾಗಿದೆ. ಇದು ಪಂಚಾಯತ್ ರಾಜ್ ವ್ಯವಸ್ಥೆ ಹಾಳಾಗಲಿದೆ ಎಂದರು.
ಇದರಿಂದ ಗ್ರಾಮ ಪಂಚಾಯತ್‌ನಲ್ಲಿ ಜನಪ್ರತಿನಿಧಿಗಳ ಅಧಿಕಾರವನ್ನು ಕಡಿತಗೊಳಿಸಿದಂತಾಗುತ್ತದೆ ಮತ್ತು ಇದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಜನರಿಗೆ ತೀವ್ರ ತೊಂದರೆಯಾಗಲಿದೆ ಎಂದು ಹೇಳಿದರು. ಜನರ ಸಮಸ್ಯೆಗಳಿಗೆ ಮೊದಲು ಸ್ಪಂದಿಸುವುದೇ ಗಾಮ ಪಂಚಾಯತ್ ಅಧ್ಯಕ್ಷರು. ಅವರ ಅಧಿಕಾರ ಕಡಿತಗೊಂಡಾಗ ಜನರ ಕೆಲಸ ಕಾರ್ಯ ವಿಳಂಬವಾಗಲಿದೆ. ಅಲ್ಲದೇ ಪಂಚಾಯತ್ ಗಳಲ್ಲಿ ಸಿಬ್ಬಂದಿಗಳ ಕೊರತೆಯು ಇದೆ. ಈಗ ಒಂದು ವಾರ್ಡ್‌ನಲ್ಲಿ 3-4 ಮಂದಿ ಸದಸ್ಯರ ಆಯ್ಕೆಗೆ ಅವಕಾಶ ಇತ್ತು. ಇನ್ನು ಒಂದು ವಾರ್ಡ್‌ಗೆ ಏಕ ಸದಸ್ಯ ವ್ಯವಸ್ಥೆ ಬರಲಿದ್ದು ಇದರಿಂದ ಹಲವರ ಜವಾಬ್ದಾರಿ ಕಸಿದು ಕೊಂಡಂತಾಗುತ್ತದೆ.15 ನೇ ಹಣಕಾಸು ಅನುದಾನ ಹೊರತು ಪಡಿಸಿ ಪಂಚಾಯತ್‌ಗೆ ಅಭಿವೃದ್ಧಿಗೆ ಯಾವುದೇ ಅನುದಾನ ಬರ್ತಾ ಇಲ್ಲ. 15ನೇ ಹಣಕಾಸಿನಲ್ಲಿಯೂ ಕಡಿತ ಮಾಡಲಾಗುತ್ತಿದೆ. ಬಂದ ಅನುದಾನದಲ್ಲಿಯೂ ಶೇ.18 ಜಿಎಸ್‌ಟಿ ಕಟ್ಟಬೇಕಾಗಿದೆ. ಇದರಿಂದ ಅಭಿವೃದ್ಧಿ ಅನುದಾನ ಇನ್ನಷ್ಟು ಕಡಿತ ಆಗುತ್ತದೆ ಎಂದು ಹೇಳಿದರು. ಕಾಂಗ್ರೆಸ್ ಸರಕಾರ ಗ್ರಾಮ ಪಂಚಾಯತ್‌ಗಳಿಗೆ ಹೆಚ್ಚು ಅಧಿಕಾರ ಮತ್ತು ಅನುದಾನವನ್ನು ನೀಡಿ ಸ್ಥಳೀಯ ಸಂಸ್ಥೆಗಳನ್ನು ಬಲ ಪಡಿಸಿತ್ತು. ಆದರೆ ಬಿಜೆಪಿ ಸರಕಾರ ಅಧಿಕಾರವನ್ನು ಮೊಟಕು ಮಾಡಿ, ಅನುದಾನವನ್ನು ಕಡಿತ ಮಾಡಿ ಪಂಚಾಯತ್‌ರಾಜ್ ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಪೆರುವಾಜೆ ಗ್ರಾ.ಪಂ.ಸದಸ್ಯ ಸಚಿನ್ ರಾಜ್ ಶೆಟ್ಟಿ, ಪೆರುವಾಜೆ ಗ್ರಾ.ಪಂ.ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಕಲ್ಮಡ್ಕ ಗ್ರಾ.ಪಂ.ಅಧ್ಯಕ್ಷೆ ಹಾಜಿರಾ ಅಬ್ದುಲ್ ಗಫೂರ್, ಉಬರಡ್ಕ ಮಿತ್ತೂರು ಗ್ರಾ.ಪಂ.ಅಧ್ಯಕ್ಷೆ ಚಿತ್ರಾ ಕುಮಾರಿ, ಅಜ್ಜಾವರ ಗ್ರಾ.ಪಂ.ಉಪಾಧ್ಯಕ್ಷೆ ಲೀಲಾ ಮನಮೋಹನ್, ಜಯಪ್ರಕಾಶ್ ನೆಕ್ರಪ್ಪಾಡಿ, ಎನ್.ಎಸ್.ಡಿ.ವಿಠಲದಾಸ್, ಅನಿಲ್ ಬಳ್ಳಡ್ಕ, ಮಣಿಕಂಠ, ಕಾಂಗ್ರೆಸ್ ಮಾಧ್ಯಮ ಸಂಯೋಜಕ ಭವಾನಿಶಂಕರ ಕಲ್ಮಡ್ಕ ಉಪಸ್ಥಿತರಿದ್ದರು.