ಕಲ್ಮಡ್ಕ ಗ್ರಾಮ ಪಂಚಾಯತಿನಲ್ಲಿ ಗಾಂಧಿ ಜಯಂತಿ ಪ್ರಯುಕ್ತ ವಿಶೇಷ ಗ್ರಾಮ ಸಭೆಯನ್ನು ಆಯೋಜಿಸಲಾಯಿತು. ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪಾರ್ಚನೆಯನ್ನು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಹಾಜಿರಾ ಗಫೂರ್ ನೆರವೇರಿಸಿ ಗ್ರಾಮ ಸಭೆಯ ಅಧ್ಯಕ್ಷತೆಯನ್ನು ವಹಿಸಿದರು. ಗ್ರಾಮ ಸಭೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಲೋಕೇಶ್ ಆಕ್ರಿಕಟ್ಟೆ ಇವರು ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ಲಾಸ್ಟಿಕ್ ಬಳಕೆ ನಿಷೇಧದ ಕುರಿತು ಠರವು ಮಂಡಿಸಿ ಅನುಮೋದನೆಯನ್ನು ಪಡೆಯಲಾಯಿತು. ಗ್ರಾಮ ನೈರ್ಮಲ್ಯ ಕ್ರಿಯಾ ಯೋಜನೆ, 101 ಪೌಷ್ಟಿಕ ತೋಟಗಳ ರಚನೆಯ ಫಲಾನುಭವಿಗಳ ಆಯ್ಕೆಯನ್ನು ಮಾಡಲಾಯಿತು. ಪಿ.ಎಂ.ಎ.ವೈ ಫಲಾನುಭವಿಗಳ ಆಯ್ಕೆಯ ಕುರಿತು ಹಾಗೂ ದೂರದೃಷ್ಟಿ ಯೋಜನೆಯ ಗ್ರಾಮವಾರು ಸಮಿತಿ ರಚನೆ ಮತ್ತು ಸಿದ್ಧಪಡಿಸುವಿಕೆಯ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಜೆ.ಜೆ.ಎಮ್ ಯೋಜನೆಯ ಜಿಲ್ಲಾ ಸಂಯೋಜಕರಾದ ಸುರೇಶ್ ಇವರು ಸ್ವಚ್ಛತೆಯ ಬಗ್ಗೆ ಘನತ್ಯಾಜ್ಯ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿದರು ನಂತರ ಪಡ್ಪಿನಂಗಡಿ ಮತ್ತು ಪಂಚಾಯತ್ ವಠಾರದಲ್ಲಿ ಹಾಗೂ ಪಡ್ಪಿನಂಗಡಿ ಬಸ್ ತಂಗುದಾಣವನ್ನು ಪ್ರಕೃತಿ ಯುವತಿ ಮಂಡಲದ ಸಹಯೋಗದೊಂದಿಗೆ ಸ್ವಚ್ಛತೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಸದಸ್ಯರುಗಳಾದ ಲೋಕೇಶ್ ಆಕ್ರಿಕಟ್ಟೆ, ಲೋಕಯ್ಯ ನಾಯ್ಕ , ಮೀನಾಕ್ಷಿ ಕೆ, ಜಯಲತಾ ಕೆ.ಡಿ , ಜೆ.ಜೆ.ಎಮ್ ಯೋಜನೆಯ ಜಿಲ್ಲಾ ಸಂಯೋಜಕರಾದ ಸುರೇಶ್ ಮತ್ತು ಅಭಿಲಾಷ್ ಕೆ.ಎಮ್, ಸಿ.ಎಚ್.ಓ ಸೌಮ್ಯ, ಸಂಜೀವಿನಿ ಸಂಘದ ಸದಸ್ಯರು, ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರಾದ ನಳಿನಿ ಕುಮಾರಿ ಎ, ಕಸ್ತೂರಿ ಎಂ, ಲೀಲಾವತಿ, ಆಶಾ ಕಾರ್ಯಕರ್ತೆಯರಾದ ಯಮುನಾ, ವಾರಿಜ ಎಸ್ ರೈ, ದಮಯಂತಿ, ಚಂದ್ರಾವತಿ , ಪ್ರಕೃತಿ ಯುವತಿ ಮಂಡಲ ಪಡ್ಪಿನಂಗಡಿಯ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸರ್ವ ಸದಸ್ಯರು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಸ್ವಚ್ಛತಾ ಸಿಬ್ಬಂದಿ ಮತ್ತು ಸ್ವಚ್ಛತಾವಾಹಿನಿಯ ಚಾಲಕ ಮಹೇಶ್ ಆಕ್ರಿಕಟ್ಟೆ ಹಾಗೂ ಗ್ರಾಮಸ್ಥರು ಹಾಜರಿದ್ದರು. ಪಂಚಾಯತ್ ಕಾರ್ಯದರ್ಶಿ ಗೋಪಾಲಕೃಷ್ಣ ಕೆ ಸ್ವಾಗತಿಸಿ,ವಂದಿಸಿದರು.
- Wednesday
- November 27th, 2024