ಕೊಡಗು ವೈದ್ಯಕೀಯ ಶಿಕ್ಷಣ ಸಂಸ್ಥೆ, ಮಡಿಕೇರಿ ಮತ್ತು ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ,ಸಂಪಾಜೆ ಕೊಡಗು ,ಇವರ ಆಶ್ರಯದಲ್ಲಿ ಶ್ರೀ ಭಗವಾನ್ ಸಂಘ (ರಿ) ಚೆಂಬು ,ಆಯೋಜಿಸಿದ ಉಚಿತ ವೈದ್ಯಕೀಯ ತಪಾಸಣೆ ಚಿಕಿತ್ಸೆ ಮತ್ತು ಸಲಹಾ ಶಿಬಿರ ಸೆ.30ರಂದು ಬಾಲಂಬಿಯ ಪಯಸ್ವಿನಿ ಸೊಸೈಟಿ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.
ಪಯಸ್ವಿನಿ ಪ್ರಾ.ಕೃ.ಪ.ಸಹಕಾರ ಸಂಘದ ಅದ್ಯಕ್ಷರಾದ ಶ್ರೀ. ಯನ್.ಸಿ.ಅನಂತಿರುವಬೈಲು ರವರು ಬೆಳಗುವ ಮೂಲಕ ಶಿಬಿರಕ್ಕೆ ನೀಡಿ ,ಗ್ರಾಮೀಣ ಜನತೆಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಮತ್ತು ಪ್ರಾರಂಬಿಕ ಹಂತದಲ್ಲಿ ಸೂಕ್ತ ತಪಾಸಣೆ ನಡೆಸುವಂತೆ ಸಲಹೆ ವಹಿಸಿ.ಮಕ್ಕಳ ತಜ್ಞ ಡಾ.ಡಿ.ಸಿ.ರವಿಚಂದ್ರ ಮಾತನಾಡಿ ಗ್ರಾಮ ಜ್ಯೋತಿ ಗ್ರಾಮಗಳಲ್ಲಿ ಬಡಜನತೆಗೆ ತಜ್ಞದಿಂದ ಉಚಿತ ಚಿಕಿತ್ಸೆ ನೀಡುವುದು,ಗ್ರಾಮಸ್ಥರು ಇದರ ಪ್ರಯೋಜನ ಪಡೆದುಕೊಳ್ಳಲು ಕರೆ ನೀಡಿದರು.
ಶಿಬಿರದಲ್ಲಿ ಮಕ್ಕಳಾದ ಡಾ.ಖುಷ್ವಂತ್ ಕೋಳಿಬೈಲು ,ಡಾ.ಡಿ.ಸಿ.ರವಿಚಂದ್ರ ,ಡಾ.ಕುಮಾರ್ ,ಚರ್ಮರೋಗ ತಜ್ಞೆ ಡಾ.ಕವನ ,ನೇತ್ರ ತಜ್ಞ ಡಾ.ಮಹಮ್ಮದ್ ಅಬ್ದುಲ್ ಕಯೂಮ್ ,ದಂತತಜ್ಞ ಡಾ.ಸಾಗರ್ ರವರು ಚಿಕಿತ್ಸೆ ನೀಡಿ ನೆರವಾದರು.ಗ್ರಾಮದ ನೂರಾರು ಜನರಿಗೆ ಈ ಶಿಬಿರದ ಪ್ರಯೋಜನ ಪಡೆದುಕೊಂಡರು .