Ad Widget

ಸುಳ್ಯ: ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಮಹಾಸಭೆ

ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘ ಇದರ ವಾರ್ಷಿಕ ಮಹಾಸಭೆಯು ಸೆ.28ರಂದು ಸಂಘದ ಕಟ್ಟಡದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷರುಗಳಾದ ಪ್ರಭಾಕರ ನಾಯರ್, ಆದಂ ಹಾಜಿ ಕಮ್ಮಾಡಿ, ರಾಮಚಂದ್ರ ಪಿ, ಸಿ.ಎ. ಗಣೇಶ್ ಭಟ್ ವೇದಿಕೆಯಲ್ಲಿದ್ದರು.
ಪ್ರಧಾನ ಕಾರ್ಯದರ್ಶಿ ಡಿ.ಎಸ್. ಗಿರೀಶ್ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಸುರೇಶ್ಚಂದ್ರ ಕಮಿಲ ಲೆಕ್ಕಪತ್ರ ಮಂಡಿಸಿದರು. ಶ್ರೀಮತಿ ಮಧು ಮುರುಳ್ಯ ಪ್ರಾರ್ಥಿಸಿ, ಪ್ರಭಾಕರ ನಾಯರ್ ವಂದಿಸಿದರು. ಸಂಘದ ನೂತನ ಸದಸ್ಯತ್ವ ಪಡೆದ ಸದಸ್ಯರಿಗೆ ಸರ್ಟಿಫಿಕೇಟ್ ವಿತರಿಸಲಾಯಿತು.
ವರದಿ ಸಾಲಿನಲ್ಲಿ ನಿಧನರಾದ ಜ್ಯೋತಿ ಇಂಡಸ್ಟ್ರೀಸ್ ಮಾಲಕ ಜಗನ್ನಾಥ ರೈ, ರಾಘವೇಂದ್ರ ಜ್ಯುವೆಲ್ಲರ್ ಮಾಲಕ ನಾಗರಾಜ ಶೇಟ್ ರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

. . . . . . .

ಈ ಸಂದರ್ಭದಲ್ಲಿ ವರ್ತಕರ ಸಂಘಕ್ಕೆ 21 ನಿರ್ದೇಶಕರನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು ಒಂದು ವಾರದೊಳಗೆ ನಿರ್ದೇಶಕರ ಸಭೆ ಕರೆದು ಅಲ್ಲಿ ಪದಾಧಿಕಾರಿಗಳ ಆಯ್ಕೆ ಮಾಡಲು ಸಭೆ ನಿರ್ಧರಿಸಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!