Ad Widget

ಸಂಪಾಜೆ : ಪಯಸ್ವಿನಿ ಪ್ರಾ. ಕೃ.ಪ. ಸ. ಸಂಘದಲ್ಲಿ ಅಗಲಿದ ಮಾಜಿ ನಿರ್ದೇಶಕರಿಗೆ ಶ್ರದ್ಧಾಂಜಲಿ

ಕೊಡಗು ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಈ ಹಿಂದೆ ಆಡಳಿತ ಮಂಡಳಿಯ ನಿರ್ದೇಶಕರಾಗಿ ಸೇವೆ ಸಲ್ಲಿಸಿ,ಈಗ ಅಕಾಲಿಕವಾಗಿ ನಿಧನ ಹೊಂದಿದ ದಿ.ಗಾಂಧಿಪ್ರಸಾದ್ ಬಂಗಾರಕೋಡಿ ಮತ್ತು ದಿ.ರತ್ನಾಕರ ದೊಡ್ಕಜೆ ರವರಿಗೆ ಸೆ. 10 ರಂದು ಶ್ರದ್ಧಾಂಜಲಿ ಕಾರ್ಯಕ್ರಮ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

. . . . . . . . .

ಸಂಸ್ಥೆಯ ಅದ್ಯಕ್ಷರಾದ ಅನಂತ್ ಊರುಬೈಲುರವರು ಮೃತ ನಿರ್ದೇಶಕರು ತಮ್ಮ ಆಡಳಿತದ ಅವಧಿಯಲ್ಲಿ ಸಂಘದ ಅಭಿವೃದ್ಧಿಗೆ ನೀಡಿದ ಸೇವೆಯನ್ನು ಸ್ಮರಿಸಿ, ನುಡಿನಮನ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ರಾಜಾರಾಮ ಕಳಗಿ ಸಿಇಒ ಬಿ.ಕೆ.ಆನಂದ ,ಆಡಳಿತ ಮಂಡಳಿ ನಿರ್ದೇಶಕರು,ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading