Ad Widget

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜ ವತಿಯಿಂದ ಗೀತ ಗಾಯನ ಸ್ಪರ್ಧೆ 2022

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪಂಜ ಸ್ಥಳೀಯ ಸಂಸ್ಥೆಯ ವತಿಯಿಂದ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿರುವ ಕಬ್, ಬುಲ್ ಬುಲ್, ಸ್ಕೌಟ್, ಗೈಡ್, ರೋವರ್, ರೇಂಜರ್ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತ ಗಾಯನ ಸ್ಪರ್ಧೆಯು ದಿನಾಂಕ 27.08.2022 ಶನಿವಾರದಂದು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮುರುಳ್ಯ ಅಲೆಕ್ಕಾಡಿ ಇಲ್ಲಿ ಜರಗಿತು.

. . . . . . . . .

. . . . . . .

ಗೀತಗಾಯನ ಸ್ಪರ್ಧೆಯನ್ನು ಮುರುಳ್ಯ ಶಾಲೆಯ ಎಸ್ ಡಿ ಎಂ ಸಿ ಯ ಉಪಾಧ್ಯಕ್ಷ ಅವಿನಾಶ್ ಬಿ ದೀಪ ಬೆಳಗಿಸಿ ಉದ್ಘಾಟಿಸಿದರು. ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಮಾಧವ ಬಿಕೆ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಶಿಕ್ಷಣ ಸಂಯೋಜಕರಾದ ವಸಂತ ಏನೆಕಲ್ಲು, ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷರಾದ ಬಾಲಕೃಷ್ಣ ಹೇಮಳ, ಸೋಮಶೇಖರ ನೇರಳ, ದಾಮೋದರ ನೇರಳ ಉಪಸ್ಥಿತರಿದ್ದರು. ಮುರುಳ್ಯ ಶಾಲೆಯ ಮುಖ್ಯ ಶಿಕ್ಷಕಿ ಸ್ಥಳೀಯ ಸಂಸ್ಥೆಯ ಜೊತೆ ಕಾರ್ಯದರ್ಶಿ ಶ್ರೀಮತಿ ಶಶಿಕಲ ಪಿ ಸ್ವಾಗತಿಸಿ, ಕಾರ್ಯದರ್ಶಿ ಉದಯಕುಮಾರ್ ರೈ ಎಸ್ ವಂದಿಸಿದರು. ಉದ್ಘಾಟನಾ ಕಾರ್ಯಕ್ರಮವನ್ನು ಸ್ಕೌಟರ್ ಶಿವಪ್ರಸಾದ್ ಜಿ ಮತ್ತು ಗೈಡರ್ ಸರೋಜಿನಿ ಕೆ ನಿರೂಪಿಸಿದರು.

ಗೀತ ಗಾಯನ ಸ್ಪರ್ಧೆಯ ತೀರ್ಪುಗಾರರಾಗಿ ಶ್ರೀ ಗಣೇಶ ನಡುವಳ ನೂಜಿಬಾಳ್ತಿಲ, ಜಯಂತ ಪಿ ಚಾರ್ವಾಕ, ಪುರೋಹಿತ್ ಸಚಿನ್ ಶರ್ಮ ಮುರುಳ್ಯ ಸಹಕರಿಸಿದರು.
ಸ್ಪರ್ಧೆಯಲ್ಲಿ ಸ್ಕೌಟ್ ವಿಭಾಗದ 10 ತಂಡ, ಗೈಡ್ ವಿಭಾಗದ 11 ತಂಡ, ಕಬ್ ವಿಭಾಗದ 3 ತಂಡ, ಬುಲ್ ಬುಲ್ ವಿಭಾಗದ 4 ತಂಡ ಒಟ್ಟು ಸೇರಿ 175 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು.

ಗೀತ ಗಾಯನ ಸ್ಪರ್ಧೆಯ ಸಮಾರೋಪ ಸಮಾರಂಭವು ಮುರುಳ್ಯ ಶಾಲಾ ಎಸ್ ಡಿಎಂಸಿ ಅಧ್ಯಕ್ಷೆ ಶ್ರೀಮತಿ ಮಧು ಪಿ ಆರ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ವಿಶೇಷ ಆಹ್ವಾನಿತರಾದ ನಿವೃತ್ತ ಶಿಕ್ಷಕರಾಗಿರುವ ಶ್ರೀ ವೆಂಕಪ್ಪಗೌಡ ಆಲಾಜೆ ವಿಜೇತರಿಗೆ ಬಹುಮಾನ ಪ್ರಶಸ್ತಿ ಪತ್ರ ವಿತರಿಸಿ ಶುಭ ಹಾರೈಸಿದರು. ಮುರುಳ್ಯ ಶಾಲಾ ಗೈಡ್ ಶಿಕ್ಷಕಿ ನಳಿನಾಕ್ಷಿ ವಂದಿಸಿದರು.

ಫಲಿತಾಂಶ
ಕಬ್ ವಿಭಾಗ
ಪ್ರಥಮ: ತನ್ಮಯ್ ಕೆ ಶೆಟ್ಟಿ, ಸ ಹಿ ಪ್ರ ಶಾಲೆ ಮುರುಳ್ಯ ಶಾಂತಿನಗರ
ದ್ವಿತೀಯ: ಯಶ್ವಿನ್, ಕೆಪಿಎಸ್ ಪ್ರಾಥಮಿಕ ವಿಭಾಗ ಬೆಳ್ಳಾರೆ
ತೃತಿಯ: ನಂದನ್ ಡಿ, ಸ ಉ ಹಿ ಪ್ರಾ ಶಾಲೆ ಮುರುಳ್ಯ

ಬುಲ್ ಬುಲ್ ವಿಭಾಗ
ಪ್ರಥಮ : ಸಹನ್ಯಾ, ಸ ಹಿ ಪ್ರಾ ಶಾಲೆ ಮುರುಳ್ಯ ಶಾಂತಿನಗರ
ದ್ವಿತೀಯ: ರಕ್ಷಿತಾ, ಕೆಪಿಎಸ್ ಪ್ರಾಥಮಿಕ ವಿಭಾಗ ಬೆಳ್ಳಾರೆ
ತೃತಿಯ: ಸಾನ್ವಿ ಎನ್ ಎಸ್, ಸ ಮಾ ಹಿ ಪ್ರ ಶಾಲೆ ಪಂಜ ಮತ್ತು ಆಯಿಷತ್ ಸಾನಿಹ, ಸ ಉ ಹಿ ಪ್ರಾ ಶಾಲೆ ಮುರುಳ್ಯ

ಸ್ಕೌಟ್ ವಿಭಾಗ
ಪ್ರಥಮ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಣ್ಮೂರು
ದ್ವಿತೀಯ: ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲ
ತೃತಿಯ: ವಿದ್ಯಾಬೋಧಿನೀ ಹಿ ಪ್ರಾ ಶಾಲೆ ಬಾಳಿಲ

ಗೈಡ್ ವಿಭಾಗ
ಪ್ರಥಮ: ಸ ಉ ಹಿ ಪ್ರಾ ಶಾಲೆ ಮುರುಳ್ಯ
ದ್ವಿತೀಯ: ಎಸ್ ಎಸ್ ಪಿ ಯು ಕಾಲೇಜು ಪ್ರೌಢಶಾಲಾ ವಿಭಾಗ ಸುಬ್ರಹ್ಮಣ್ಯ
ತೃತಿಯ: ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading