ಸುಳ್ಯದ ನಿರಂತರ ಯೋಗ ಕೇಂದ್ರದ ವಿದ್ಯಾರ್ಥಿ ಲಜ್ಜಾ.ಸಿ ಶೆಟ್ಟಿ ಸೂರಿಂಜೆ ಯೋಗಾಸನದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ಮಾಡಿದ್ದಾರೆ.
ಇವರು ಮರೀಚ್ಯಾಸನದಲ್ಲಿ 01 ಗಂಟೆ 06 ನಿಮಿಷ 12 ಸೆಕೆಂಡುಗಳ ಕಾಲ ಒಂದೇ ಸ್ಥಿತಿಯಲ್ಲಿ ಇರುವ ಮೂಲಕ ದಾಖಲೆ ಮಾಡಿದ್ದಾರೆ. ಯೋಗಗುರು ಶರತ್ ಮರ್ಗಿಲಡ್ಕ ರವರ ಜೊತೆ ಮಾರ್ಗದರ್ಶನ ಪಡೆಯುತ್ತಿರುವ ಇವರು ಇನ್ ಫೆಂಟ್ ಮೇರಿ ಶಾಲೆ ಕಾಟಿಪಳ್ಳ ಇಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಇವರು ಸೂರಿಂಜೆ ಮಾರ್ಲರ ಮನೆ ನಿವಾಸಿ ಚಂದ್ರಹಾಸ ಶೆಟ್ಟಿ ಮತ್ತು ಶ್ರೀಮತಿ ಮಮತಾ ಶೆಟ್ಟಿ ದಂಪತಿಗಳ ಪುತ್ರಿ.
ವರದಿ :- ಉಲ್ಲಾಸ್ ಕಜ್ಜೋಡಿ