ಮಂಡೆಕೋಲು ಗ್ರಾಮ ಪಂಚಾಯತ್ ಸಿಬ್ಬಂದಿ ಶ್ರೀಮತಿ ವಾಣಿಶ್ರೀ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿನ್ನೆ ತಡರಾತ್ರಿ ನಿಧನರಾದರು.
ಅವರಿಗೆ 35 ವರ್ಷ ವಯಸ್ಸಾಗಿತ್ತು.
ಕೆಲ ತಿಂಗಳ ಹಿಂದೆ ಅಸೌಖ್ಯಕ್ಕೊಳಗಾಗಿದ್ದ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಮರಳಿದ್ದರು. ವಾರದ ಹಿಂದೆ ಮತ್ತೆ ಅಸೌಖ್ಯ ಉದ್ಭವಿಸಿದಾಗ ಮಂಗಳೂರಿಗೆ ದಾಖಲಿಸಲಾಗಿತ್ತು.
ಆದರೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.
ಮೃತರು ಪತಿ ಸಂತೋಷ್ ಮಾವಂಜಿ ಹಾಗೂ ಇಬ್ಬರು ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.