ಯುವಕ ಮಂಡಲ(ರಿ) ಮಡಪ್ಪಾಡಿ, ಮಂಜುಶ್ರೀ ಯಕ್ಷಗಾನ ಕಲಾ ಸಂಘ(ರಿ)ಮಡಪ್ಪಾಡಿ,ಶ್ರೀ ರಾಮ ಭಜನಾಮಂಡಳಿ ಮಡಪ್ಪಾಡಿ, ಉಜ್ವಲ ಮಹಿಳಾ ಮಂಡಲ(ರಿ) ಮಡಪ್ಪಾಡಿ, ಶಾಲಾಭಿವೃದ್ಧಿ ಸಮಿತಿ ಮಡಪ್ಪಾಡಿ ಹಾಗೂ ಸಮಸ್ತ ಗ್ರಾಮಸ್ಥರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಮಡಪ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ ದೀಪ ಬೆಳಗಿಸಿ ಉದ್ಘಾಟಿಸಿದರು. ಧನ್ಯಕುಮಾರ್ ದೇರುಮಜಲು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಕುಂತಲಾ ಕೇವಳ ಅಧ್ಯಕ್ಷರು ಮಡಪ್ಪಾಡಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ, ವಿನಯಕುಮಾರ್ ಮುಳುಗಾಡು ಮಾಜಿ ಅಧ್ಯಕ್ಷರು,ಎ.ಪಿ.ಎಂ.ಸಿ.ಸುಳ್ಯ, ಸ.ಹಿ.ಪ್ರಾ.ಶಾಲೆ.ಮಡಪ್ಪಾಡಿಯ ಮುಖ್ಯೋಪಾಧ್ಯಾಯ ಜಗದೀಶ ಮಾಸ್ತರ್, ನಿವೃತ್ತ ಪೊಲೀಸ್ ಅಧಿಕಾರಿ ನಾರಾಯಣ ಚಿದ್ಗುಲ್ ಇವರು ಸಭಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇವರು ತಮ್ಮ ತಾಯಿಯವರ ಸವಿನೆನಪಿಗಾಗಿ 10000 ರೂಪಾಯಿಗಳ ದತ್ತಿನಿಧಿ ಬಹುಮಾನವನ್ನು ಶಾಲೆಗೆ ಹಸ್ತಾಂತರಿಸಿದರು,ನಂತರ ತೆಂಗಿನ ಕಾಯಿ ಒಡೆಯುವ ಮೂಲಕ ಮೊಸರು ಕುಡಿಕೆ ಸ್ಪರ್ಧೆ ಉದ್ಘಾಟಿಸಿದರು.
ನಂತರ ಅಂಗನವಾಡಿ ಪುಟಾಣಿಗಳಿಗೆ ಶ್ರೀ ಕೃಷ್ಣ ವೇಷ ಸ್ಪರ್ಧೆ, ಶಾಲಾ ಮಕ್ಕಳಿಗೆ ಹಾಗೂ ಊರ ಗ್ರಾಮಸ್ಥರಿಗೆ ವಿವಿಧ ಸ್ಪರ್ಧೆಗಳು ಜರುಗಿದವು,
ಸಂಜೆ ಸಮಾರೋಪ ಹಾಗೂ ಬಹುಮಾನ ವಿತರಣೆ
ಈ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಡಪ್ಪಾಡಿ ಮಂಜುಶ್ರೀ ಯಕ್ಷಗಾನ ಕಲಾ ಸಂಘ ಅಧ್ಯಕ್ಷರು ಯಂ.ಜಿ.ಲೋಕಯ್ಯ ಇವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಎ.ಪಿ.ಎಂ.ಸಿ.ಸುಳ್ಯ ಮಾಜಿ ಅಧ್ಯಕ್ಷ ವಿನಯಕುಮಾರ್ ಮುಳುಗಾಡು , ಜಯರಾಮ ಹಾಡಿಕಲ್ಲು ಸದಸ್ಯರು ಗ್ರಾಮ ಪಂಚಾಯತ್ ಮಡಪ್ಪಾಡಿ, ಮಾಧವ ಶೀರಡ್ಕ ಅಧ್ಯಕ್ಷರು ಎಸ್.ಡಿ.ಎಂ.ಸಿ. ದ.ಕ.ಜಿ.ಪ.ಸ.ಹಿ.ಪ್ರಾ.ಶಾಲೆ.ಮಡಪ್ಪಾಡಿ, ತುಳಸಿ ಕೇವಳ ನಿರ್ದೇಶಕರು,
ಯುವ ಜನ ಸಂಯುಕ್ತ ಮಂಡಳಿ(ರಿ) ಸುಳ್ಯ ಹಾಗೂ ಅಧ್ಯಕ್ಷರು ಉಜ್ವಲ ಮಹಿಳಾ ಮಂಡಲ(ರಿ) ಮಡಪ್ಪಾಡಿ, ಮಡಪ್ಪಾಡಿ ಶ್ರೀ ರಾಮ ಭಜನಾಮಂಡಳಿ ಅಧ್ಯಕ್ಷ ಸಚಿನ್ ಬಳ್ಳಡ್ಕ ಹಾಗೂ ಎಲ್ಲಾ ಜಂಟಿ ಸಂಘ ಸಂಸ್ಥೆಗಳ ಅಧ್ಯಕ್ಷರು ಈ ಸಭಾ ವೇದಿಕೆಯಲ್ಲಿ ಉಪಸ್ಥಿತರಿದ್ದು ಹಾಗೂ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು.
ಕಾರ್ಯಕ್ರಮವನ್ನು ಗುತ್ತಿಗಾರು ಪದವಿ ಪೂರ್ವ ಕಾಲೇಜು ಉಪನ್ಯಾಸಕ ರಂಜಿತ್ ಅಂಬೆಕಲ್ಲು ನಿರೂಪಿಸಿದರು.