Ad Widget

ಕವನ :- ಮೂಕ ಮನಸಿದು ಎತ್ತ ಸಾಗಿದೆ…

ಮಾತು ಮಾತಲಿ ಮೌನ ಮುರಿದಿದೆ,

. . . . .

ಕನಸು ಕಾಣುತ ಕಣ್ಣು ದಣಿದಿದೆ,

ಹೃದಯ ಬಡಿತವು ಕೇಳದಾಗಿದೆ,

ಮೂಕ ಮನಸಿದು ಎತ್ತ ಸಾಗಿದೆ…

ಹೆಜ್ಜೆ ಹೆಜ್ಜೆಗೂ ಪ್ರಶ್ನೆ ಮೂಡಿದೆ,

ಬದುಕಿಗುತ್ತರ ದೊರೆಯದಾಗಿದೆ,

ಒಂಟಿ ಬದುಕಿದು ಎತ್ತ ಸಾಗಿದೆ…

ನಾಳೆಯೆಂಬುದು ಪ್ರಶ್ನೆಯಾಗಿದೆ,

ಗೆಲುವ ಕ್ಷಣಕೆ ಬದುಕು ಕಾದಿದೆ,

ಒಂಟಿ ಬದುಕಿದು ಗುರಿಯತ್ತ ನಡೆದಿದೆ…

ದಾರಿ ದೂರಕೂ ಖಾಲಿಯಾಗಿದೆ,

ಒಬ್ಬಂಟಿ ಬದುಕಿದು ಶೂನ್ಯವಾಗಿದೆ,

ಖಾಲಿಯಾದ ದಾರಿಯಲ್ಲಿ ಮೈಲಿಗಲ್ಲು

ಹುಡುಕಿ ಸಾಗುತ ಶೂನ್ಯದಿಂದಲೇ

ಗುರಿಯ ತಲುಪುವ ಕನಸು ಇನ್ನೂ ಮನಸಿನಲ್ಲಿದೆ,

ಮನದ ಕನಸಿಗೆ ರೆಕ್ಕೆ ಕಟ್ಟುತ

ಬದುಕು ಇಂದು ಮುಂದೆ ಸಾಗಿದೆ…

✍️ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!