Ad Widget

ಮಸೀದಿಗಳಲ್ಲಿ ಕೋಮುವಾದಕ್ಕೆ ಯಾವುದೇ ರೀತಿಯ ಸಹಕಾರ ಇಲ್ಲ – ಟಿ.ಎಂ.ಶಹೀದ್

ಇಂದಿನ ಯುವ ಜನತೆ ಕೋಮುಗಲಭೆಗೆ ತುತ್ತಾಗುತ್ತಿರುವ ವಿಷಯವಾಗಿ ತೆಕ್ಕಿಲ್ ಪ್ರತಿಷ್ಠಾನದ ಟಿ.ಎಂ.ಶಹೀದ್ ಅವರಿಂದ ಆ.16ರಂದು ಪತ್ರಿಕಾಗೋಷ್ಟಿ ನಡೆಯಿತು.

. . . . . .

ಈ ಸಂದರ್ಭದಲ್ಲಿ ಮಾತನಾಡಿದ ಅವರು ಸುಳ್ಯದಲ್ಲಿ ಎರಡು ಹತ್ಯೆ ಮಾಡಿದ್ದು ದೊಡ್ಡ ನಷ್ಟ ಉಂಟಾಗಿದೆ ಈ ನಷ್ಟವನ್ನು ಯಾವ ಸಂಘಟನೆಗಳು ಭರ್ತಿ ಮಾಡಲು ಸಾಧ್ಯವಿಲ್ಲ. ಮುಖ್ಯವಾಗಿ ಯುವಕರು ಜೀವ ತೆಗೆಯುವ ಮಟ್ಟಕ್ಕೆ ಹೋಗುವುದು ಒಳ್ಳೆ ಲಕ್ಷಣ ಅಲ್ಲ. ಇದಕ್ಕೆ ಪೂರಕವಾಗಿ ಕೆಲವು ಸಂಘಟನೆಗಳು ಯುವಕರನ್ನು ದಾರಿ ತಪ್ಪಿಸುತ್ತಿದೆ. ಕೋಮು ಗಲಭೆಗಳಿಂದ ಹೆಚ್ಚಿನ ಯುವಕರು ಜೈಲಿಗೆ ಹೋಗುತ್ತಿದ್ದಾರೆ ಇದಕ್ಕೆ ಸಂಘಟನೆಗಳೇ ಕಾರಣ ಕರ್ತರಾಗಿರಬಹುದು.

ಮುಖ್ಯವಾಗಿ ಇಂದು ಮಾದಕದ ಅಮಲು ಹಾಗೂ ಧರ್ಮದ ಅಮಲು ಜಾಸ್ತಿಯಾಗಿದೆ. ಇಂದು ಟಿಪ್ಪು ಸಾವರ್ಕರ್ ವಿಷಯದಿಂದ ನಮ್ಮ ಸಮಾಜ ಕಲುಷಿತ ಗೊಳ್ಳುತ್ತಿದೆ. ಅವರಿಂದಾಗಿ ನಮ್ಮೊಳಗೆ ಹೋರಾಟವಾಗುವುದು ಸರಿಯಲ್ಲ. ಕೆಲವರು ನಡೆಸುವ ಕೋಮುವಾದದಿಂದ ಇಡಿ ಸಮುದಾಯವನ್ನು ದೂರುವುದು ತಪ್ಪು. ಯಾವ ಸಮುದಾಯ ತಪ್ಪು ಮಾಡಿದರೂ ಅದು ತಪ್ಪೇ. ಇಂದು ಮೂರು ಕೊಲೆ ನಡೆಸಿದರು ಏನು ಲಾಭವಾಗಿದೆ . ಒಬ್ಬ ದೇಶದ ಪ್ರಜೆಯನ್ನು ಕೊಂದರೆ ಅದು ಭಾರತಾಂಬೆಯ ಕೊಂದಂತೆಯಾಗುವುದು ಅದಲ್ಲದೆ ಕೋಮು ವಿಚಾರದ ವಿಡಿಯೋಗಳನ್ನು ಯುವಜನತೆಗೆ ಪಸರಿಸಿ ಕೋಮು ಭಾವನೆಗಳನ್ನು ಕೆರಳಿಸುವಂತೆ ಮಾಡಬೇಡಿ. ಇಲ್ಲಿ ಎಲ್ಲಾ ಸಮುದಾಯಕ್ಕೂ ಸಮಾನತೆಯ ನ್ಯಾಯ ಇರಬೇಕು ಹಾಗೂ ಮಸೀದಿಗಳಲ್ಲಿ ಕೋಮುವಾದಕ್ಕೆ ಯಾವುದೇ ರೀತಿಯ ಸಹಕಾರ ಇಲ್ಲ ಮತ್ತು ಕೋಮುಗಲಭೆಗೆ ಯಾವುದೇ ರೀತಿಯಲ್ಲಿ ಸಂಘಟನೆಗಳು ಒತ್ತು ಕೊಡಬಾರದು. ಕೋಮುಗಲಭೆ ಸಮಸ್ಯೆಯನ್ನು ನಿಲ್ಲಿಸಬೇಕು ಯುವ ಜನತೆಯನ್ನು ನಿರುದ್ಯೋಗದಿಂದ ಹೊರಗೆ ತಂದು ಉತ್ತಮ ಸಂಘಟನೆಗಳ ಜೊತೆ ಕೆಲಸ ಮಾಡಿದರೆ ಇಂತಹ ಕೃತ್ಯ ಕಡಿಮೆಯಾಗಬಹುದು ಎಂದರು.

ಕೋಮುಗಲಭೆಗೆ ಬರುವಂತ ವಿಚಾರ ಹಾಗೂ ಸಹಾಯ ಮಾಡುವವರಿಗೆ ಪೋಲಿಸರು ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಮೂರು ವ್ಯಕ್ತಿಗಳ ಕೊಲೆ ಪ್ರಕರಣದಲ್ಲಿ ಕೊಲೆಗಾರರನ್ನು ಬಂಧಿಸಿ ಸಹಕರಿಸಿದಕ್ಕೆ ಟಿ.ಎಂ.ಶಹೀದ್ ಪೋಲಿಸರಿಗೆ ಧನ್ಯವಾದ ತಿಳಿಸಿದರು.

ಗೋಷ್ಠಿಯಲ್ಲಿ ಶರೀಫ್ ಕಂಠಿ, ಸಿದ್ದಿಕ್ ಕೊಕ್ಕೊ, ಶಮೀರ್ ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!