Ad Widget

ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಆಚರಣೆ

ಕೆವಿಜಿ ಐಪಿಎಸ್, ಕೆವಿಜಿ ಐಟಿಐ ಮತ್ತು ಕೆವಿಜಿ ಅಮರಜ್ಯೋತಿ ಪಿಯು ಕಾಲೇಜು ಜಂಟಿಯಾಗಿ ಅ.15 ರಂದು ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಲಾಯಿತು .

. . . . . . . . .

ಕೆವಿಜಿ ಐಟಿಐ ಸಿಬ್ಬಂದಿ ಭವಾನಿ ಶಂಕರ್ ಅಡ್ತಲೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ನಿವೃತ್ತ ಸೈನಿಕ ಸಂಘ ಸುಳ್ಯ ಇದರ ಉಪಾಧ್ಯಕ್ಷ ಮಾಧವ ಬಿ. ಕೆ ಅವರನ್ನು ಪರಿಚಯಿಸಿದರು. ಮುಖ್ಯಅತಿಥಿಗಳು ಧ್ವಜಾರೋಹಣ ಮಾಡಿ ‘ ನಾವು ಈ ಸಂದರ್ಭದಲ್ಲಿ ನಮ್ಮ ದೇಶದ ಸ್ವಾತಂತ್ರ್ಯಕ್ಕೆ ಬಲಿದಾನರಾದ ಹಿರಿಯ ಜೀವಗಳನ್ನು ನೆನಪಿಸಿಕೊಳ್ಳೋಣ. ನಾವು ನಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ಮಾಡಿ ದೇಶ ಸೇವೆಯನ್ನು ಮಾಡಬೇಕು ಜೊತೆಗೆ ಒಗ್ಗಟ್ಟಿನಲ್ಲಿ ಬಲವಿದೆ, ಭಾರತೀಯರೆಲ್ಲರೂ ಒಟ್ಟು ಸೇರಿ ದೇಶಸೇವೆಗೆ ಮುನ್ನುಗ್ಗಬೇಕು’ಎಂದು ತಿಳಿಸಿದರು.

. . . . . . .

ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಪ್ರಧಾನ ಕಾರ್ಯದರ್ಶಿಗಳಾದ ಡಾ. ರೇಣುಕಾಪ್ರಸಾದ್ ಕೆವಿ ‘ ದೇಶ ಕಟ್ಟಲು ಇಂದಿನ ವಿದ್ಯಾರ್ಥಿಗಳೇ ರೂವಾರಿಗಳು. ಆದುದರಿಂದ ವಿದ್ಯಾರ್ಥಿಗಳೇ ದೇಶವನ್ನು ಬಲಿಷ್ಠಗೊಳಿಸಬೇಕು ‘ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಹತ್ತನೇ ತರಗತಿಯ ಸೃಜನಿ ಬಿ.ಕೆ ಸ್ವಾತಂತ್ರ್ಯ ಆಚರಣೆಯ ಮಹತ್ವದ ಕುರಿತು ತಿಳಿಸಿದಳು.

ಈ ಸಂದರ್ಭದಲ್ಲಿ ಅಂಕುರ್ ಪಬ್ಲಿಕ್ ಸ್ಕೂಲ್, ನಾಪೋಕ್ಲು ಶಾಲೆಯಲ್ಲಿ ರಾಜ್ಯ ಮಟ್ಟದ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಡಾ. ರೇಣುಕಾಪ್ರಸಾದ್ ಕೆ. ವಿ, ಕೆವಿಜಿ ಐಪಿಎಸ್ ನ ಕಾರ್ಯನಿರ್ವಹಣಾ ಅಧಿಕಾರಿ ಡಾ. ಉಜ್ವಲ್ ಯು. ಜೆ ಮತ್ತು ಮುಖ್ಯ ಅತಿಥಿಗಳು ಸೇರಿ ಪ್ರಶಸ್ತಿ ಪತ್ರಗಳನ್ನು ನೀಡಿ ಸನ್ಮಾನಿಸಿದರು.

ಬಳಿಕ ಕೆವಿಜಿ ಐಪಿಎಸ್ ಮತ್ತು ಕೆವಿಜಿ ಅಮರ ಜ್ಯೋತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ದೇಶಭಕ್ತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು. ಅಮೃತ ಮಹೋತ್ಸವದಲ್ಲಿ ಕೆವಿಜಿ ಐಟಿಐನ ಪ್ರಾಂಶುಪಾಲರಾದ ಚಿದಾನಂದ, ಅಮರಜ್ಯೋತಿ ಪಿಯು ಕಾಲೇಜಿನ ಉಪಪ್ರಾಂಶುಪಾಲ ದೀಪಕ್, ಕೆವಿಜಿ ಐಪಿಎಸ್ ನ ಉಪಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ, ನಿವೃತ್ತ ಪೊಲೀಸ್ ಅಧೀಕ್ಷಕರು ರಾಮದಾಸ್ ಗೌಡ, ಎನ್. ಎ ರಾಮಚಂದ್ರ, ಶ್ರೀಮತಿ ಲೀಲಾವತಿ ಮಾಧವ, ಪ್ರಸನ್ನ ಕಲ್ಲಾಜೆ, ಮಾಧವ ಬಿ ಟಿ, ಡಾ. ಮನೋಜ್, ಡಾ. ರೇವಂತ್ ಉಪಸ್ಥಿತರಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಸ್ವಾತಂತ್ರ್ಯ ದಿನದ ಅಂಗವಾಗಿ ಎಲ್ಲಾ ವಿದ್ಯಾರ್ಥಿಗಳು ಮಾಡಿದ ಕ್ರಾಫ್ಟ್ ವರ್ಕ್ ನ ಪ್ರದರ್ಶನವನ್ನು ಅತಿಥಿಗಳು ಮತ್ತು ಪೋಷಕರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕೆವಿಜಿ ಐಪಿಎಸ್ ನ ಪ್ರಾಂಶುಪಾಲ ಅರುಣ್ ಕುಮಾರ್ ಪ್ರೀತಿಪೂರ್ವಕವಾಗಿ ಸ್ವಾಗತಿಸಿ, ಕೆವಿಜಿ ಅಮರಜ್ಯೋತಿ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಯಶೋಧ ರಾಮಚಂದ್ರ ವಂದಿಸಿ, ಈ ಕಾರ್ಯಕ್ರಮವನ್ನು ಅಮರ ಜ್ಯೋತಿ ಕಾಲೇಜಿನ ವಿದ್ಯಾರ್ಥಿಗಳಾದ ಮನಸ್ವಿ ಮತ್ತು ದೃತಿಕ ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading