ಮಿತ್ತಮಜಲಿನಲ್ಲಿ ನಡೆದ ಅಪಘಾತ – ಪ್ರಕರಣ ಆರೋಪಿ ದೋಷಮುಕ್ತ

ನೆಲ್ಲೂರು ಕೆಮ್ರಾಜೆ ಗ್ರಾಮದ ಚೇತನ್ ಕುಮಾರ್ ದಿನಾಂಕ 13.05.2022 ರಂದು ಎಂಬುವವರು ಚಲಾಯಿಸುತ್ತಿದ್ದ ಕೆಎ.21ವೈ 4185 ವಾಹನದಲ್ಲಿ ಸುಳ್ಯ ಕಡೆಯಿಂದ ತನ್ನ ಸಹ ಸವಾರ ಶಶಿಕಾಂತ್ ಎಂಬುವವನನ್ನು ಕೂರಿಸಿಕೊಂಡು ಮಿತ್ತಮಜಲು ತಲುಪುತ್ತಿದ್ದಂತೆ ಸುಳ್ಯ ಕಡೆಗೆ ಬರುತ್ತಿದ್ದ ಪಿಕ್ ಅಪ್ ವಾಹನದ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತಪ್ಪು ಬದಿಗೆ ಬಂದು ಮೋಟಾರ್ ಸೈಕಲ್ ಗೆ ಡಿಕ್ಕಿಪಡಿಸಿದ ಪರಿಣಾಮ ಮೋಟಾರ್ ಸೈಕಲ್ ಸವಾರ ಚೇತನ್ ಕುಮಾರ್ ನ ಎಡ ಮೊಣಕಾಲಿನ ಕೆಳಗೆ ಮತ್ತು ಬಲ ಮೊಣಕೈ ಹಾಗೂ ಹೊಟ್ಟೆಯ ಬಳಿ ಮತ್ತು ಸಹ ಸವಾರ ಶಶಿಕಾಂತ ನಿಗೆ ತಲೆ ಹಾಗೂ ಮುಖಕ್ಕೆ ರಕ್ತ ಗಾಯಗಳಾಗಿದ್ದು ಅವರನ್ನು ಚಿಕಿತ್ಸೆಗಾಗಿ ಸುಳ್ಯ ಸರಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆಗೊಳಪಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಶಿಕಾಂತ ನನ್ನು ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಸದ್ರಿ ಅಪಘಾತವು ಪಿಕ್ ಅಪ್ ವಾಹನದ ಚಾಲಕನ ತಪ್ಪಿನಿಂದ ಸಂಭವಿಸಿದೆ ಎಂದು ಆರೋಪಿಸಿ ಚೇತನ್ ಕುಮಾರ್ ರವರ ಸಂಬಂಧಿ ಗಂಗಾಧರ್ ನೀಡಿದ ದೂರಿನ ಆಧಾರದಲ್ಲಿ ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 279,337,338 ಜೊತೆಗೆ 146, ಮತ್ತು 196 ಮೋಟಾರು ವಾಹನ ಕಾಯಿದೆ ಅಡಿಯಲ್ಲಿ ಶಿಕ್ಷಾರ್ಹವಾದ ಅಪರಾಧವೆಸಗಿರುತ್ತಾರೆ ಪ್ರಸ್ತುತ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ. ಆರೋಪವನ್ನು ಅಭಿಯೋಜನೆಯು ಸಾಬೀತುಪಡಿಸಲು ವಿಫಲವಾಗಿದೆ ಎಂದು ಪರಿಗಣಿಸಿ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಸೋಮಶೇಖರ. ಎ ರವರು ಆರೋಪಿ ಪ್ರದೀಪ್ ಅವರನ್ನು ದೋಷಯುಕ್ತಗೊಳಿಸಿ ತೀರ್ಪು ನೀಡಿರುತ್ತಾರೆ. ಆರೋಪಿ ಪರವಾಗಿ ನ್ಯಾಯವಾದಿಗಳಾದ ಜಗದೀಶ್ ದಾಸನಕಜೆ ಹಾಗೂ ಸಂದೀಪ್ ಮೊಟ್ಟೆಮನೆ ವಳಲಂಬೆ ಇವರು ವಾದಿಸಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading