ಪರಮಪೂಜ್ಯಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ಜನ್ಮದಿನೋತ್ಸವ ಗ್ರಾಮೋತ್ಸವ ಗುರುವಂದನೆ ಅಂಗವಾಗಿ ಸುಳ್ಯದ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಮತ್ತು ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಶಾಖೆ , ಗುರುದೇವ ಸೇವಾ ಬಳಗ ಸುಳ್ಯ ಕುಕ್ಕುಜಡ್ಕ ಮುರುಳ್ಯ ಇವುಗಳ ಸಹಭಾಗಿತ್ವದಲ್ಲಿ ಸುಳ್ಯ ತಾಲೂಕು ಮಟ್ಟದ ಕ್ರೀಡೋತ್ಸವವು ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ನಡೆಯಿತು. ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ನಿರ್ದೇಶಕಿ ಶಾರದಾ ಮಣಿ ಎಸ್ ಡಿ ರೈ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸುಳ್ಯ ತಾಲೂಕಿನ ಮೇಲ್ವಿಚಾರಕಿ ಗೀತಾ ನೆಟ್ಟಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಫಲಾನುಭವಿಗಳಿಗೆ ಬೆಳ್ಳಾರೆ ಘಟ ಸಮಿತಿಯ ವತಿಯಿಂದ ಧನಸಹಾಯ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವನಾಥ ಶೆಟ್ಟಿ ಅಧ್ಯಕ್ಷರು ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ, ಸುಳ್ಯ ತಾಲೂಕು ಘಟ ಸಮಿತಿ ವಹಿಸಿದ್ದರು.
ವೇದಿಕೆಯಲ್ಲಿ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ್ ಪನ್ನೆ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಒಡಿಯೂರು ಇದರ ಯೋಜನಾ ನಿರ್ದೇಶಕ ಕಿರಣ್ ಊರ್ವ, ಮುರುಳ್ಯ ಸೇವಾ ಬಳಗದ ಅಧ್ಯಕ್ಷ ಮಹಾಬಲ ರೈ, ಜಿಲ್ಲಾ ಧಾರ್ಮಿಕ ಪರಿಷತ್ ದಕ್ಷಿಣ ಕನ್ನಡ ಇದರ ಸದಸ್ಯರಾದ ಕೆಎನ್ ರಘುನಾಥರೈ ಕಟ್ಟ ಬೀಡು, ಸುಳ್ಯ ಸೇವಾ ಬಳಗದ ಅಧ್ಯಕ್ಷರಾದ ರಾಧಾಕೃಷ್ಣ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಸುಳ್ಯ ಇದರ ವ್ಯವಸ್ಥಾಪಕ ಸಂತೋಷ್ ಕುಮಾರ್ ಶೆಟ್ಟಿ, ಕುಕ್ಕುಜಡ್ಕ ಗುರುದೇವ ಸೇವಾ ಬಳಗದ ಅಧ್ಯಕ್ಷ, ಗಣೇಶ್ ಪಿಲಿಕಜೆ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಸುಳ್ಯ ತಾಲೂಕು ಘಟ ಸಮಿತಿ ಉಪಾಧ್ಯಕ್ಷರಾದ ಶ್ರೀಮತಿ ರೇವತಿ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ,ಸುಳ್ಯ ತಾಲೂಕು ಇದರ ಮೇಲ್ವಿಚಾರಕರಾದ ಶ್ರೀಮತಿ ಗೀತಾ ನೆಟ್ಟರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವೀರನಾಥ ಪಡು ಬೆಳ್ಳಾರೆ ಸ್ವಾಗತಿಸಿ, ಸುಹಾಸ್ ಮುರುಳ್ಯವಂದಿಸಿದರು. ಪ್ರದೀಪ್ ಮುರುಳ್ಯ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ ಸಮಾರಂಭ ದಲ್ಲಿ ಕಳಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ವಿಶ್ವನಾಥ ರೈ, ಬೆಳ್ಳಾರೆ ವಲಯ ಅಧ್ಯಕ್ಷರಾದ ವೀರನಾಥ ಮುರುಳ್ಯ ಗುರುದೇವ ಸೇವಾಬಳಗದ ಕಾರ್ಯದರ್ಶಿಯಾದ ಸುನಿಲ್ ರೈಬಲ್ನಾಡಿ ಉಪಸ್ಥಿತರಿದ್ದರು. ಶ್ರೀಗಳವರ ಜನ್ಮದಿನೋತ್ಸವ ಕ್ರೀಡೋತ್ಸವ ಸಮಿತಿ ಸುಳ್ಯ ತಾಲೂಕು ಇದರ ಸಂಚಾಲಕರಾದ ಜೆಕೆ ರೈ ಅಧ್ಯಕ್ಷತೆ ವಹಿಸಿದ್ದು ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಉಮೇಶ್ ಗುತ್ತಿಗಾರು ಸ್ವಾಗತಿಸಿ, ಶ್ರೀಮತಿ ಗೀತಾ ವಂದಿಸಿದರು.