ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಭಾವನಾ ಸುಗಮ ಸಂಗೀತ ಬಳಗ(ರಿ.)ಸುಳ್ಯ ಇವರ ಸಹಯೋಗದಲ್ಲಿ ನಡೆಯುತ್ತಿರುವ ದೇಶಭಕ್ತಿ ಗೀತೆ ಗಾಯನ ಅಭಿಯಾನ-2022 ಸರಣಿಯ 6 ನೇ ಕಾರ್ಯಕ್ರಮ ಚೊಕ್ಕಾಡಿ ಪ್ರೌಢಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶಾಲಾ ಸಂಚಾಲಕ ಶ್ರೀ ರಾಧಾಕೃಷ್ಣ ಬೊಳ್ಳೂರು ದೇಶಭಕ್ತಿ ಗೀತೆಗಳ ಗಾಯನದ ಮೂಲಕ ದೇಶ ಪ್ರೇಮವನ್ನು ವಿದ್ಯಾರ್ಥಿಗಳಲ್ಲಿ ಜಾಗೃತಗೊಳಿಸುವ ಸಾಹಿತ್ಯ ಪರಿಷತ್ತಿನ ಕಾರ್ಯವನ್ನು ಶ್ಲಾಘಿಸಿದರು.ಕನ್ನಡ ನಾಡು-ನುಡಿಯ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು ಎಂದು ಅವರು ಹೇಳಿದರು.
ಭಾವನಾ ಸುಗಮ ಸಂಗೀತ ಬಳಗದ ಸ್ಥಾಪಕ,ಗಾಯಕ ಶ್ರೀ ಕೆ.ಆರ್.ಗೋಪಾಲಕೃಷ್ಣ,ಶಾಲಾ ಆಡಳಿತ ಮಂಡಳಿಯ ನಿರ್ದೇಶಕರಾದ ಶ್ರೀ ಆನಂದ ಚಿಲ್ಪಾರು,ಶ್ರೀ ವೆಂಕಟ್ರಮಣ ಇಟ್ಟಿಗುಂಡಿ,ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಶ್ರೀ ಕೃಷ್ಣಪ್ರಸಾದ್ ಮಾಡಬಾಕಿಲು,ಚೊಕ್ಕಾಡಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಚೈತ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಚೊಕ್ಕಾಡಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಸಂಕೀರ್ಣ ಎ.ಎಲ್ ಅತಿಥಿಗಳನ್ನು ಸ್ವಾಗತಿಸಿದರು.ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ ಪೇರಾಲು ಪ್ರಾಸ್ತಾವಿಕ ನುಡಿಗಳನ್ನಾಡಿದರು.ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ತೇಜಸ್ವಿ ಕಡಪಳ ವಂದನಾರ್ಪಣೆಗೈದರು.
ಸಹ ಶಿಕ್ಷಕಿ ಶ್ರೀಮತಿ ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು.
ಶ್ರೀ ಕೆ.ಆರ್.ಗೋಪಾಲಕೃಷ್ಣ ಮತ್ತು ಅವರ ತಂಡದ ಸದಸ್ಯರಾದ ಶ್ರೀಮತಿ ಸತ್ಯವತಿ,ಶ್ರೀಮತಿ ಸುನೀತಾ,ಶ್ರೀಮತಿ ಮೀರಾ ಮತ್ತು ಕುಮಾರಿ ಲಿಪಿ ಶ್ರೀ ಯವರು ದೇಶಭಕ್ತಿ ಗೀತೆಗಳನ್ನು ಹಾಡಿದರು.
ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಮತ್ತು ಚೊಕ್ಕಾಡಿ ಆಂಗ್ಲ ಮಾಧ್ಯಮ ಶಾಲೆ ಕಾರ್ಯಕ್ರಮದಲ್ಲಿ ಸಹಭಾಗಿಗಳಾಗಿದ್ದವು.