ಕೊಲ್ಲಮೊಗ್ರ ಬಿಎಸ್ ಎನ್ ಎಲ್ ಟವರ್ ಬಗ್ಗೆ ಕಳೆದ ವಾರ ಅಮರ ಸುದ್ದಿ ವೆಬ್ಸೈಟ್ ವರದಿ ಪ್ರಕಟಿಸಿ ನಿದ್ದೆಯಲ್ಲಿದ್ದ ಅಧಿಕಾರಿಗಳನ್ನು ಎಚ್ಚರಿಸಿತ್ತು. ಈ ಬಗ್ಗೆ ಯುವ ಮುಂದಾಳು ಉದಯ ಶಿವಾಲ ಪ್ರಧಾನಮಂತ್ರಿ ಕಛೇರಿ ಗೆ ಪತ್ರ ಬರೆದು ಒತ್ತಾಯಿಸಿದ್ದು ಅಲ್ಲದೇ ಎಲ್ಲಾ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ಬೆನ್ನು ಬಿಡದೇ ಸತತ ಪ್ರಯತ್ನಿಸಿದ್ದರು. ದಿನ ಮುಂದೂಡುತ್ತಿದ್ದ ಅಧಿಕಾರಿಗಳು ಕೊನೆಗೂ ಇಂದು (ಜೂ.೫) ಕೊಲ್ಲಮೊಗ್ರ ಬಿಎಸ್ ಎನ್ ಎಲ್ ಟವರ್ ಗೆ ೩ಜಿ ನೆಟ್ವರ್ಕ್ ಅಳವಡಿಸಿದ್ದಾರೆ. ಈ ಬಗ್ಗೆ ಪ್ರಯತ್ನಿಸಿದ ಶಾಸಕರು, ಸಂಸದರು, ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ, ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಯವರಿಗೆ ಜನತೆ ಕೃತಜ್ಞತೆ ಸಲ್ಲಿಸಿದ್ದಾರೆ.
- Friday
- November 22nd, 2024