ಗ್ರಾಮ ಪಂಚಾಯತ್ ಬೆಳ್ಳಾರೆ, ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಮತ್ತು ನವಚೇತನ ಯುವಕ ಮಂಡಲ (ರಿ.) ಬೊಳುಬೈಲು ಇವುಗಳ ಸಂಯುಕ್ತ ಆಶ್ರಯದಲ್ಲಿ ಇಂದು ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ 1837 ರ ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟ ಉಪನ್ಯಾಸ ಮಾಲಿಕೆಯ ಉದ್ಘಾಟನೆ ಬಂಗ್ಲೆಗುಡ್ಡೆ ಬ್ರಿಟಿಷ್ ಖಜಾನೆಯ ಬಳಿ ಮತ್ತು ಉಪನ್ಯಾಸ ಕಾರ್ಯಕ್ರಮ ಕರ್ನಾಟಕ ಪಬ್ಲಿಕ್ ಶಾಲೆ ಬೆಳ್ಳಾರೆಯಲ್ಲಿ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ ವಹಿಸಿದ್ದರು. ಉದ್ಘಾಟನೆ ಮತ್ತು ಪ್ರಧಾನ ಉಪನ್ಯಾಸವನ್ನು ಸಂಶೋಧಕ ಮತ್ತು ನ್ಯಾಯವಾದಿ ವಿದ್ಯಾಧರ ಕುಡೆಕಲ್ಲು ನೆರವೇರಿಸಿದರು. ಗುತ್ತಿಗೆದಾರ ಚಂದ್ರಶೇಖರ ನೆಕ್ರಾಜೆ, ಕರ್ನಾಟಕ ಪಬ್ಲಿಕ್ ಶಾಲೆ ಬೆಳ್ಳಾರೆಯ ಹಿರಿಯ ಉಪನ್ಯಾಸಕ ವಿಶ್ವನಾಥ, ಉಪಪ್ರಾಂಶುಪಾಲೆ ಶ್ರೀಮತಿ ಉಮಾಕುಮಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುವಕ ಮಂಡಲದ ಅಧ್ಯಕ್ಷ ಶಶಿಪ್ರಸಾದ್ ಕಾಟೂರು ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಪ್ರವೀಣ ಕಾಟೂರು ನಿರೂಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಬಂಟಮಲೆ ಪ್ರಕಾಶನದ ಎ.ಕೆ ಹಿಮಕರ, ಗೋಪಾಲ ಪೆರಾಜೆ ಮತ್ತು ತೇಜಕುಮಾರ್ ಬಡ್ಡಡ್ಕ, ಚಲನಚಿತ್ರ ನಿರ್ದೇಶಕ ಸುಧೀರ್ ಏನೆಕಲ್ ಮತ್ತು ಯುವಕ ಮಂಡಲದ ಪದಾಧಿಕಾರಿಗಳಾದ ನಿತಿನ್ ಕುಮಾರ್ ಅರ್ಭಡ್ಕ, ಲಕ್ಷ್ಮೀನಾರಾಯಣ ಬೊಳುಬೈಲು, ನಿತಿನ್ ಬೊಳುಬೈಲು, ಸುಭಾಷ್ ಕುಕ್ಕಂದೂರು, ವೆಂಕಟೇಶ್ ನಡುಬೆಟ್ಟು, ಧರ್ಮೇಶ್ ಕಾಯರಡ್ಕ, ಕಾಲೇಜು ಉಪನ್ಯಾಸಕರು, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.