ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪಂಜ ಸ್ಥಳೀಯ ಸಂಸ್ಥೆಯ ವಾರ್ಷಿಕ ಮಹಾಸಭೆಯು ದಿನಾಂಕ 21.07.2022 ಗುರುವಾರ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಮಾಧವ ಬಿ ಕೆ ಇವರ ಅಧ್ಯಕ್ಷತೆಯಲ್ಲಿ ಪಂಜ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜರುಗಿತು.
ಜಿಲ್ಲಾ ಸ್ಕೌಟ್ ಆಯುಕ್ತರಾದ ರಾಮಶೇಷ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಎಂಜಿ ಕಜೆ, ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಭರತ್ ರಾಜ್ ಭಾಗವಹಿಸಿ ಸ್ಥಳೀಯ ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದರು. ರಾಜ್ಯ ಮತ್ತು ಜಿಲ್ಲಾ ಸಂಸ್ಥೆಯ 2022-23ರ ಕಾರ್ಯಕ್ರಮಗಳ ಮಾಹಿತಿಯನ್ನು ನೀಡಿ, ಶುಭ ಹಾರೈಸಿದರು.
ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್ ಪಿ ಮಹದೇವ ಭಾಗವಹಿಸಿ, ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಸ್ಕೌಟ್ ಗೈಡ್ ಚಟುವಟಿಕೆಗಳು ನಿರಂತರವಾಗಿ ನಡೆಯುವಂತಾಗಬೇಕು, ಸ್ಕೌಟ್ ಗೈಡ್ ಸಂಸ್ಥೆ ಶಿಕ್ಷಣ ಇಲಾಖೆಯ ಒಂದು ಭಾಗವಾಗಿರುತ್ತದೆ. ದಳ ನೋಂದಾಯಿಸದ ಶಾಲೆಗಳು ಮುಂದಿನ ದಿನಗಳಲ್ಲಿ ನೋಂದಾಯಿಸಿ, ದಳ ತೆರೆಯುವಂತೆ ಸೂಚಿಸಲಾಗುವುದೆಂದು ತಿಳಿಸಿದರು.
ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಶೀತಲ್ ಭಾಗವಹಿಸಿ ಶುಭ ಹಾರೈಸಿದರು. ಸುಳ್ಯ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ, ಸ್ಕೌಟ್ ಗೈಡ್ ನೋಡಲ್ ಅಧಿಕಾರಿಯು ಆಗಿರುವ ಸೂಫಿ ಪೆರಾಜೆ ಭಾಗವಹಿಸಿ ಸಂತಸವನ್ನು ಹಂಚಿಕೊಂಡರು. ಜಿಲ್ಲಾ ಉಪಾಧ್ಯಕ್ಷ ಎಡಿಸಿ ವಿಮಲ ರಂಗಯ್ಯ, ಶಿಕ್ಷಣ ಸಂಯೋಜಕಿ ಸಂಧ್ಯಾಕುಮಾರಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಉಪಾಧ್ಯಕ್ಷರಾದ ಬಾಲಕೃಷ್ಣ ಹೇಮಳ, ದಾಮೋದರ ನೇರಳ, ಬಾಲಕೃಷ್ಣ ರೈ ಬಿಕ್ರಿ, ಮಧು ಪಿ ಆರ್ ಉಪಸ್ಥಿತರಿದ್ದರು.
2021-22ರ ವಾರ್ಷಿಕ ವರದಿ, 2022-23ರ ಯೋಜಿತ ಕಾರ್ಯಕ್ರಮಗಳ ಮಾಹಿತಿಯನ್ನು ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಉದಯಕುಮಾರ್ ರೈ ಬಾಳಿಲ ನೀಡಿದರು. 2021-22 ಲೆಕ್ಕಪತ್ರ ಹಾಗೂ 2022-23ರ ಮುಂಗಡಪತ್ರವನ್ನು ಸ್ಥಳೀಯ ಸಂಸ್ಥೆಯ ಕೋಶಾಧಿಕಾರಿ ವಾಸುದೇವ ನಡ್ಕ ಮಂಡಿಸಿದರು. ಇದೇ ಸಂದರ್ಭದಲ್ಲಿ ಪ್ರಿಎಎಲ್ ಟಿ ತರಬೇತಿಯನ್ನು ಪಡೆದ ಸ್ಕೌಟ್ ಶಿಕ್ಷಕ ಶಿವಪ್ರಸಾದ್ ಜಿ ಅವರಿಗೆ ಪ್ರೋತ್ಸಾಹಕ ಧನವನ್ನು, ಸ್ಥಳೀಯ ಸಂಸ್ಥೆಯ ದ್ವಿತೀಯ ಸೋಪಾನ ಪರೀಕ್ಷಾ ಪ್ರಮಾಣ ಪತ್ರಗಳನ್ನು ಶಾಲೆಗಳಿಗೆ ವಿತರಿಸಲಾಯಿತು.
2022-27ರ ಅವಧಿಗೆ ನೂತನ ಪದಾಧಿಕಾರಿಗಳ ನೇಮಕ ಮಾಡಲಾಯಿತು.
ಅಧ್ಯಕ್ಷರಾಗಿ ಮಾಧವ ಬಿ ಕೆ. ಕಾರ್ಯಧ್ಯಕ್ಷರಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಪಿ ಮಹದೇವ, ಪ್ರಧಾನ ಕಾರ್ಯದರ್ಶಿಯಾಗಿ ಉದಯಕುಮಾರ್ ರೈ ಬಾಳಿಲ, ಕೋಶಾಧಿಕಾರಿಯಾಗಿ ವಾಸುದೇವ ನಡ್ಕ, ಸ್ಥಳೀಯ ಸಂಸ್ಥೆಯ ಎ ಡಿ ಸಿ ಗಳಾಗಿ ದೇವಿಪ್ರಸಾದ್ ಜಾಕೆ, ವಿಮಲಾ ರಂಗಯ್ಯ, ಉಪಾಧ್ಯಕ್ಷರಾಗಿ ಸೋಮಶೇಖರ ನೆರಳ, ಬಾಲಕೃಷ್ಣ ಹೇಮಳ, ದಾಮೋದರ ನೆರಳ, ಬಾಲಕೃಷ್ಣ ರೈ ಬಿಕ್ರಿ, ಮಧು ಪಿ ಆರ್, ಪ್ರವೀಣ್ ಮುಂಡೋಡಿ , ಜೊತೆ ಕಾರ್ಯದರ್ಶಿಯಾಗಿ ಶಶಿಕಲಾ ಪಿ, ಸಹಾಯಕ ಕಾರ್ಯದರ್ಶಿಯಾಗಿ ಶಿವಪ್ರಸಾದ್ ಜಿ, ಸ್ಕೌಟರ್ ಪ್ರತಿನಿಧಿಗಳಾಗಿ ಲಿಂಗಪ್ಪ ಬಿ, ವೇದಾವತಿ, ಗೈಡರ್ ಪ್ರತಿನಿಧಿಗಳಾಗಿ ಸರೋಜಿನಿ ಪಡ್ಪಿನಂಗಡಿ, ನಳಿನಾಕ್ಷಿ ಮುರುಳ್ಯ ಆಯ್ಕೆಗೊಂಡರು.
ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಪದವಿಪೂರ್ವ ಮತ್ತು ಪದವಿ ಕಾಲೇಜುಗಳ ಸ್ಕೌಟ್ ಶಿಕ್ಷಕರು ಗೈಡ್ ಶಿಕ್ಷಕಿಯರು ರೋವರ್ ರೇಂಜರ್ ಉಪನ್ಯಾಸಕರು ಹಾಗೂ ಅಂಗನವಾಡಿ ಕೇಂದ್ರಗಳ ಬನ್ನಿ ಶಿಕ್ಷಕಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಎಡಿಸಿ ದೇವಿಪ್ರಸಾದ್ ಜಾಕೆ ಸ್ವಾಗತಿಸಿ, ಉಪಾಧ್ಯಕ್ಷ ಸೋಮಶೇಖರ ನೆರಳ ವಂದಿಸಿದ ಈ ಕಾರ್ಯಕ್ರಮವನ್ನು ಕಾರ್ಯದರ್ಶಿ, ಉದಯಕುಮಾರ್ ರೈ ಬಾಳಿಲ ನಿರೂಪಿಸಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ರೋವರ್ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಸಹಕರಿಸಿದರು.
ಮಹಾಸಭೆಯ ಬಳಿಕ ಸ್ಕೌಟ್ ಗೈಡ್ ಶಿಕ್ಷಕರಿಗೆ ಭರತ್ ರಾಜ್, ದಾಮೋದರ ನೆರಳ, ಶಿವಪ್ರಸಾದ್ ಜಿ ಮಾಹಿತಿ ಕಾರ್ಯಾಗಾರವನ್ನು ನಡೆಸಿದರು.