ಕರ್ನಾಟಕ ರಾಜ್ಯ ಅರೆಭಾಷೆ ಕಲಾವಿದರ ಒಕ್ಕೂಟದ ಪದಾಧಿಕಾರಿಗಳ ಸಾಮಾನ್ಯ ಸಭೆ ಜು. 18 ರಂದು ಶ್ರೀ ಚೆನ್ನಕೇಶವ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಜಯಪ್ರಕಾಶ್ ಮೊಂಟಡ್ಕ ವಹಿಸಿದ್ದರು. ಓಟದ ನೋಂದಣಿ ಕಾರ್ಯದ ಪ್ರಗತಿ ಮತ್ತು ಸದಸ್ಯರ ಸೇರ್ಪಡೆ ಮತ್ತು ಒಕ್ಕೂಟದ ಅಭಿವೃದ್ಧಿಯ ಇತರ ವಿಷಯಗಳ ಬಗ್ಗೆ ಚರ್ಚಿಸಿ, ಜೂನಿಯರ್ ಮತ್ತು ಸೀನಿಯರ್ ವಿಭಾಗದಲ್ಲಿ ಆನ್ಲೈನ್ ಸ್ಪರ್ಧಾ ಕಾರ್ಯಕ್ರಮವನ್ನು ನಡೆಸುವುದಾಗಿ ತೀರ್ಮಾನಿಸಲಾಯಿತು.
ಒಕ್ಕೂಟದ ಗೌರವ ಸಲಹೆಗಾರರಾದ ಕೆ. ಆರ್. ತೇಜಕುಮಾರ್ ಬಡ್ಡಡ್ಕ, ಪ್ರಧಾನ ಕಾರ್ಯದರ್ಶಿ ವಿನೋದ್ ಮೂಡಗದ್ದೆ, ಕೋಶಾಧಿಕಾರಿ ತೇಜೇಶ್ವರ್ ಕುಂದಲ್ಪಾಡಿ, ಸಂಘದ ಕಾರ್ಯದರ್ಶಿ ಪ್ರಸಾದ್ ಕಾಟೂರು, ನಿರ್ದೇಶಕರಾದ ವಿಜಯ್ ಕುಮಾರ್ ದೆಂಗೋಡಿ, ಪ್ರವೀಣ್ ಕಾಟೂರು ಉಪಸ್ಥಿತರಿದ್ದರು.
ಸದಸ್ಯೆ ರಮ್ಯಶ್ರೀ ನಡುಮನೆ ಸ್ವಾಗತಿಸಿ, ಕಾರ್ಯದರ್ಶಿ ಕಲಾಮಾಯೆ ಸುಧೀರ್ ಏನೆಕಲ್ ಸನ್ಮಾನಿಸಿದರು.