ಅರಂತೋಡು ಎಲಿಮಲೆ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಪ್ರದಾನ ಮಂತ್ರಿಗಳ ಕಾರ್ಯಾಲಯದ ವೆಬ್ಸೈಟ್ ವಿಳಾಸಕ್ಕೆ ಇಮೇಲ್ ಕಳಿಸುವ ಅಭಿಯಾನ ಇಂದಿನಿಂದ ಆರಂಭಿಸಲಾಗುವುದು ನಡೆಸಲಾಗುವುದು ಎಂದು ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳುತಿಳಿಸಿದ್ದಾರೆ. ವಾರ್ಡ್ ನ ಸಮಸ್ತ ಜನತೆ ಪ್ರಧಾನ ಮಂತ್ರಿಗಳಿಗೆ ನೇರ ಇ ಮೇಲ್ ಮಾಡುವ ಅಭಿಯಾನಕ್ಕೆ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ. ನಮ್ಮ ಊರಿನಿಂದ ಗರಿಷ್ಠ ಇ -ಮೇಲ್ ತಲುಪಿದಲ್ಲಿ, ಬೇಡಿಕೆ ಶೀಘ್ರ ಇಡೇರಬಹುದು ಎಂಬ ನೆಲೆಯಲ್ಲಿ ಪ್ರತಿ ದಿನ ಸಂಜೆ 7 ಗಂಟೆಯಿಂದ ಅಡ್ತಲೆ ಶಾಲಾ ವಠಾರದಲ್ಲಿ, ಮೇಲ್ ಮಾಡುವ ಕಾರ್ಯ ನಡೆಸಲಾಗುತ್ತದೆ. ಜನತೆ ತಮ್ಮ ಸ್ಮಾರ್ಟ್ ಫೋನ್ ಹಾಗೂ ಇ ಮೇಲ್ ವಿಳಾಸದೊಂದಿಗೆ ಹಾಜರಾಗಿ ಊರಿನ ರಸ್ತೆ ಅಭಿವೃದ್ಧಿಗೆ ಕೈ ಜೋಡಿಸಬೇಕು.ಇ – ಮೇಲ್ ವಿಳಾಸ ಇಲ್ಲದೆ ಇದ್ದಲ್ಲಿ ಸ್ಥಳದಲ್ಲಿ ಮೇಲ್ ಅಡ್ರೆಸ್ಸ್ ಮಾಡಿ ಕೊಡಲಾಗುವುದು ಎಂದು ವೇದಿಕೆಯ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Thursday
- November 21st, 2024