Ad Widget

ಗುತ್ತಿಗಾರು : ಆರು ತಿಂಗಳಲ್ಲೇ ಕುಸಿದು ಬಿದ್ದ ತಡೆಗೋಡೆ – ಕಳಪೆ ಆರೋಪ

ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಲ್ಕೂರು ಗ್ರಾಮದ ಚತ್ರಪ್ಪಾಡಿ -ಹಾಲೆಮಜಲು ಸಂಪರ್ಕ ರಸ್ತೆಯ ಚತ್ರಪ್ಪಾಡಿ ಚಂದ್ರಶೇಖರ ಆಚಾರ್ಯರವರ ಮನೆಯ ಬಳಿ ತಾಲೂಕು ಪಂಚಾಯತ್ ವತಿಯಿಂದ ರೂ 1 ಲಕ್ಷ ರೂ ಅನುದಾನದಲ್ಲಿ ನಿರ್ಮಿಸಿರುವ ತಡೆಗೋಡೆ ಕುಸಿದು ಬಿದ್ದಿದೆ. ಅಡಿಪಾಯ ತೆಗೆಯದೇ ನಿರ್ಮಿಸಿರುವುದರಿಂದ ಭಾರಿ ಮಳೆಗೆ 6 ತಿಂಗಳಲ್ಲೇ ಮಗುಚಿ ಬಿದ್ದಿದೆ. ಇದರಿಂದ ಸಂಪರ್ಕ ರಸ್ತೆ ಕೊಚ್ಚಿ ಹೋಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ತಡೆಗೋಡೆ ನಿರ್ಮಿಸಿಕೊಡುವಂತೆ ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲು ಚತ್ರಪ್ಪಾಡಿ ಭಾಗದ ನಾಗರಿಕರು ಒತ್ತಾಯಿಸಿದ್ದಾರೆ.

. . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!