ಕಲಾಮಾಯೆ(ರಿ ) ಎನೆಕಲ್ ಫಿಲ್ಮ್ ಸಂಸ್ಥೆಯ ಸಾರತ್ಯದಲ್ಲಿ ವಿದ್ಯಾಧರ ಕುಡೆಕಲ್ಲು ಇವರ ಅಮರ ಸುಳ್ಯ -1837 ಬ್ರಿಟಿಷ್ ವಸಾಹತುಶಾಹಿ ವಿರುದ್ಧದ ಸಶಸ್ತ್ರ ಹೋರಾಟ ಸಂಶೋಧನ ಕೃತಿ ಆಧಾರಿತ ಅರೆಭಾಷೆ ಮತ್ತು ಕನ್ನಡ ಚಲನಚಿತ್ರದ ಪ್ರಾರ್ಥನಾ ಮುಹೂರ್ತ ಮತ್ತು ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಜುಲೈ 15 ರಂದು ಶ್ರೀ ಮಿತ್ತೂರು ಉಳ್ಳಾಕುಲು ಮತ್ತು ನಾಯರ್ ದೈವಗಳ ಮೂಲಸ್ಥಾನ ವಠಾರ, ಇಲ್ಲಿ ನಡೆಯಿತು. ಸಂಕ್ರಮಣದ ಸಂಜೆ ಶುಭ ಕ್ಷೇತ್ರದ ಶಕ್ತಿಗಳಿಗೆ ಪ್ರಾರ್ಥನೆ ಸಲ್ಲಿಸಿದ ನಂತರ ಕೆದಂಬಾಡಿ ವೆಂಕಟ್ರಮಣ ಗೌಡ ಮತ್ತು ಕೆದಂಬಾಡಿ ಗಣೇಶ್ ಗೌಡ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದರು.
ಲೇಖಕರು ಹಾಗೂ ವಕೀಲರಾದ ವಿದ್ಯಾಧರ ಕುಡೆಕಲ್ಲು, ಹಿರಿಯ ಕಲಾವಿದರು ಸಾಹಿತಿಗಳಾದ ತೇಜಕುಮಾರ್ ಬಡ್ಡಡ್ಕ, ಸುಳ್ಯ ತಾಲೂಕು ಗೌಡ ಯುವ ಸಂಘ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಪುಷ್ಪ ರಾಧಾಕೃಷ್ಣ, ಬಂಟಮಲೆ ಪ್ರಕಾಶಕರಾದ ಎ. ಕೆ. ಹಿಮಕರ, ತಾಲೂಕು ರೈತ ಸಂಘದ ಅಧ್ಯಕ್ಷರಾದ ಲೋಲಜಾಕ್ಷ ಭೂತಕಲ್ಲು, ರೈತ ಸಂಘದ ಕಾರ್ಯದರ್ಶಿ ಭರತ್ ಕುಮಾರ್ ಐವರ್ನಾಡು, ಉಪನ್ಯಾಸಕರು, ಸಾಹಿತಿಗಳಾದ ಸಂಜೀವ ಕುದ್ಪಾಜೆ, ರಂಗ ನಿರ್ದೇಶಕ ಪ್ರಸನ್ನ ಬಡ್ಡಡ್ಕ, ಕರ್ನಾಟಕ ರಾಜ್ಯ ಅರೆಭಾಷೆ ಕಲಾವಿದರ ಒಕ್ಕೂಟದ ಸದಸ್ಯ ಕಲಾವಿದರಾದ ರಾಮಚಂದ್ರ, ಸುಬ್ರಮಣ್ಯ, ಮಿಥುನ್ ಕುಮಾರ್ ಸೋನ, ಪುಷ್ಪರಾಜ್ ಏನೆಕಲ್, ಶ್ರೀಮತಿ ಕೆದಂಬಾಡಿ ಮನೆತನ ., ಸಂದ್ಯಾ ಕೆ. ಕೀರ್ತನ್, ಹರೀಶ್, ಸರೋಜಿನಿ, ವನಿತಾ, ಆದೇಶ, ತೀರ್ಥರಾಮ, ಪೂಜಾಶ್ರೀ, ಕಮಲೇಶ್, ಶಿವಣ್ಣ, ರತ್ನಾಕರ, ದರ್ಶನ್, ಕೃಷ್ಣಪ್ಪ, ರಾಘವ ಉಬರಡ್ಕ ಹಾಗೂ ಕಲಾವಿದರು. ಎಲ್ಲಾ ಹಿರಿಯರು ಚಿತ್ರತಂಡಕ್ಕೆ ಒಳಿತಾಗಲಿ ಎಂದು ಶುಭ ಹಾರೈಸಿದರು, ಯುವ ನಟ ನಿರ್ದೇಶಕ ಕಲಾಮಾಯೆ ಸುಧೀರ್ ಏನೆಕಲ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ ಬೆಳ್ಳಿ ಪರದೆಯ ಮೇಲೆ ಪ್ರದರ್ಶನ ಕಾಣಲಿದೆ. ಹತ್ತು ಹಲವು ಸಂಘ ಸಂಸ್ಥೆಗಳು, ಮನೆತನಗಳು ಮತ್ತು ಗೌರವಾನ್ವಿತ ಮಹನಿಯರ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ಈ ಐತಿಹಾಸಿಕ ಹಂತ ಹಂತವಾಗಿ ತಂಡದ ಕಾರ್ಯ ಯೋಜನೆಗಳು. ಯುವ ನಿರೂಪಕ, ಕಲಾವಿದ , ಹರ್ಷಿತ್ ಪಡ್ರೆ ಕಾರ್ಯಕ್ರಮ ನಿರೂಪಿಸಿ.
ಬಿಡುಗಡೆ