ಎಡೆಬಿಡದೆ ಸುರಿಯುತ್ತಿರುವ ಧಾರಕಾರ ಮಳೆಗೆ ಜನ ಹೈರಾಣಗಿ ಹೋಗಿದ್ದಾರೆ . ಹಲವಾರು ಕಡೆ ಪ್ರಕೃತಿ ವಿಕೋಪಗಳು ಆಗುತ್ತಿವೆ . ಜನರ ಜೀವನದ ಕೊಂಡಿಯಂತಿರುವ ರಸ್ತೆಗಳು ಹದೆಗೆಟ್ಟು ಹೋಗಿವೆ. ಇಂತಹುದೆ ಸಮಸ್ಯೆ ಸುಮಾರು 50 ವರ್ಷಕ್ಕಿಂತಲೂ ಅಧಿಕ ಹಳೆಯದಾದ ರಸ್ತೆಗೆ ಒದಗಿ ಬಂದಿದೆ. ನೂರಾರು ಮನೆಗಳಿಗೆ ಸಂಪರ್ಕದ ಮೂಲವಾಗಿರುವ ಶೆಟ್ಟಿಗದ್ದೆ – ಮಂಞನಕಾನ ರಸ್ತೆಯ ಪಾಡು ಹೇಳತೀರದಂತಾಗಿತ್ತು. ಇದರಿಂದ ಇಲ್ಲಿನ ಜನರು ಓಡಾಡಲು ಆಗದೆ ನರಕ ಯಾತನೆ ಅನುಭವಿಸುವಂತಾಯಿತು. ಈ ಕೆಸರುಮಯವಾದ ರಸ್ತೆಯನ್ನು ಇಂದು ಇಲ್ಲಿನ ಜನರೆ ಸ್ವತಃ ಎರಡು ಲೋಡು ಕೆಂಪು ಕಲ್ಲುಗಳನ್ನು ತರಿಸಿ ರಸ್ತೆಗೆ ಅಚ್ಚುಕಟ್ಟಾಗಿ ಹಾಸಿಬಿಟ್ಟಿದ್ದಾರೆ. ಈ ರಸ್ತೆಯಲ್ಲಿ ನೂರಾರು ಮನೆಗಳಿಗೆ ಸಂಪರ್ಕದ ಕೊಂಡಿಯಾಗಿರುವುದರಿಂದ ಅಷ್ಟೆ ವಾಹನಗಳು ಕೂಡ ಈ ರಸ್ತೆಯಲ್ಲಿ ಓಡಾಡುತ್ತವೆ. ಇನ್ನೂ ಡಾಮರೀಕರಣ ಆಗದೆ ಉಳಿದಿರುವ ಈ ರಸ್ತೆಯನ್ನು ಜನರೆ ಸರಿಪಡಿಸಿರುವುದು ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ಶ್ರೀನಿವಾಸ ಭಟ್ ಜೋಗಿಬೆಟ್ಟು, ಮಾದಪ್ಪ ನಾಯ್ಕ ಮಾಳಪ್ಪ ಮಕ್ಕಿ , ವೆಂಕಪ್ಪ ನಾಯ್ಕ ಮಾಳಪ್ಪ ಮಕ್ಕಿ , ಮಹೇಶ್ ಜೋಗಿಬೆಟ್ಟು, ಭಾಸ್ಕರ ಜೋಗಿಬೆಟ್ಟು, ಉಮೇಶ್ ಜೋಗಿಬೆಟ್ಟು, ಹರೀಶ್ ಜೋಗಿಬೆಟ್ಟು, ವಸಂತ ಹೊಸ ಮನೆ, ನಾರಾಯಣ ಜೋಗಿಬೆಟ್ಟು, ವಿನೋದ್ ಮಾಳಪ್ಪಮಕ್ಕಿ, ಶ್ರೀನಿವಾಸ ಜೋಗಿಬೆಟ್ಟು, ಚೀನಾ ನಾಯ್ಕ ಹೊಸ ಮನೆ ಮತ್ತಿತರರು ಉಪಸ್ಥಿತರಿದ್ದರು.
- Friday
- November 22nd, 2024