Ad Widget

ಕೆವಿಜಿ ಅಮರಜ್ಯೋತಿ ಕಾಲೇಜಿನಲ್ಲಿ ಸಿಎ ಫೌಂಡೇಶನ್ ಕೋರ್ಸ್ ಪ್ರಾರಂಭ

ಕೆ ವಿಜಿ ಅಮರಜ್ಯೊತಿ ಪದವಿ ಪೂರ್ವ ಕಾಲೇಜಿನಲ್ಲಿ ಸಿಎ ಫೌಂಡೇಶನ್ ಕೋರ್ಸ್ ಜು.16 ರಂದು ಆರಂಭಿಸಲಾಯಿತು. ನುರಿತ ತಜ್ಞ, ತೆರಿಗೆ ಸಲಹೆಗಾರರ ಸನತ್ ಪೆರ್ವಾಡಿ ಅವರು ವಿದ್ಯಾರ್ಥಿಗಳಿಗೆ ಸಿಎ ಕೋಚಿಂಗ್ ತರಗತಿ ಆರಂಭಿಸಿದರು.ಸಿ ಎ ಫೌಂಡೇಶನ್ ಪರೀಕ್ಷೆಗೆ ಸಿದ್ಧಗೊಳಿಸಲು ಈ ಕೋರ್ಸ್ ಸಹಾಯವಾಗಲಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸುಳ್ಯ ತಾಲೂಕಿನಲ್ಲಿ ಪ್ರಪ್ರಥಮವಾಗಿ ಪಿ ಯು ಕಾಲೇಜು ಇಂಟಗ್ರೇಟೆಡ್ ಸಿ ಎ ಕೋಚಿಂಗ್ ಗೆ ಅನುವು ಮಾಡಿಕೊಟ್ಟ ಡಾ.ರೇಣುಕಾಪ್ರಸಾದ್ ಕೆ ವಿ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ, ಡಾ.ಉಜ್ವಲ್ ಯು ಜೆ, ಕಾಲೇಜಿನ ಸಿಇಓ ಅವರನ್ನು ಕಾಲೇಜಿನ ಪ್ರಾಂಶುಪಾಲರು ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರಾದ ದೀಪಕ್ ವೈ ಆರ್ ಸಿಎ ಕೋರ್ಸ್ ನ ಸಂಯೋಜಕರಾದ ದೀಕ್ಷಿತ್ ಹಾಗೂ ಉಪನ್ಯಾಸಕರಾದ ರಾಜೇಶ್ ಮತ್ತು ಅಶ್ವಿನಿರವರು ಉಪಸ್ಥಿತರಿದ್ದರು. ಮಲ್ಲಿಕಾ ಎಂ ಎಲ್ ನಿರೂಪಿಸಿದರು. ಮುಂದಿನ ದಿನಗಳಲ್ಲಿ ನಿಯಮಿತವಾಗಿ ಸಿ ಎ ಫೌಂಡೇಶನ್ ಕೋರ್ಸ್ ನಡೆಯುವುದೆಂದು ಪ್ರಾಂಶುಪಾಲರಾದ ಡಾ.ಯಶೋದ ರಾಮಚಂದ್ರ ತಿಳಿಸಿರುತ್ತಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!