ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪಿಯಲ್ಲಿ ಸುಮಾರು 2 ತಿಂಗಳುಗಳಿಂದ ಬಸ್ ನಿಲ್ದಾಣದಲ್ಲಿ ರಾತ್ರಿ ವೇಳೆ ಮಲಗುತ್ತಿದ್ದ ವ್ಯಕ್ತಿಯೊಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದನ್ನು ಗಮನಿಸಿ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್, ಮತ್ತು ರಿಕ್ಷಾ ಯೂನಿಯನ್ ನವರು ಪಂಚಾಯತ್ ಗಮನಕ್ಕೆ ತಂದರು. ತಕ್ಷಣವೇ ಸ್ಪಂದಿಸಿದ ಪಂಚಾಯತ್ ಆಡಳಿತ ಮತ್ತು ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಟ್ರಸ್ಟ್ ಆಂಬುಲೆನ್ಸ್ ಮೂಲಕ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆಯನ್ನು ಮಾಡಿದರು .
ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯ ವಿಜಯಕುಮಾರ್ ಚಾರ್ಮಾತ, ಪಿ. ಡಿ. ಓ. ಧನಪತಿ, ರಿಕ್ಷಾ ಯೂನಿಯನ್ ನ ಶಶಿಧರ್ ಕುಕ್ಕುಜೆ, ಮೋಹನ್ ದಾಸ್ ಶಿರಾಜೆ ರಾಜೇಶ್ ಉತ್ರಂಬೆ, ವಸಂತ ಚತ್ರಪ್ಪಾಡಿ, ದಯಾನಂದ ಬಾಕಿಲ, ರಮೇಶ್ ಕುಂಬಾರಕೇರಿ, ಮುತ್ತಪ್ಪನ್ ಹೋಟೆಲ್ ಮಾಲಕಿ ಸರೋಜ ಸೋಮನಾಥ್, ಉದಯ್ ಬಾಕಿಲ, ಯಶ್ವಿತಾ, ಸಹಕರಿಸಿದರು. ಆಂಬುಲೆನ್ಸ್ ಚಾಲಕರಾಗಿ ತೀರ್ಥರಾಮ ಮುಂಡೋಡಿ ಮತ್ತು ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿಯವರು ಸರಕಾರಿ ಆಸ್ಪತ್ರೆಗೆ ತಲುಪಿಸಿದರು. ಅನಾಥ ವ್ಯಕ್ತಿ ತಮಿಳುನಾಡು ಮೂಲದ ಪಳನಿ ಸ್ವಾಮಿ ಎಂದು ತಿಳಿದುಬಂದಿದೆ.