ಸುಳ್ಯ ನಗರ ಸೇರಿದಂತೆ ನ.ಪಂ ವ್ಯಾಪ್ತಿಯ ಹಲವು ರಸ್ತೆಗಳು ಸಮರ್ಪಕ ಚರಂಡಿ ವ್ಯವಸ್ಥೆಗಳಿಲ್ಲದೇ ಗುಂಡಿಗಳು ಬಿದ್ದಿದ್ದು ವಾಹನ ಸವಾರರು ಹಾಗೂ ಜನಸಾಮಾನ್ಯರ ಪ್ರಾಣ ಬಲಿಗಾಗಿ ಕಾಯುವಂತಿದೆ. ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಶೀಘ್ರ ಗಮನ ಹರಿಸಿಬೇಕಿದೆ. ಚರಂಡಿ ವ್ಯವಸ್ಥೆ ಸರಿ ಇಲ್ಲದೇ ನೀರು ರಸ್ತೆಯಲ್ಲಿ ಹರಿಯುವಂತಾಗಿದೆ. ಇದರಿಂದಾಗಿಯೇ ರಸ್ತೆಗಳೆಲ್ಲಾ ಗುಂಡಿಬೀಳುವಂತಾಗಿದೆ.
ನಗರ ಪಂಚಾಯತ್ ಅಲ್ಲಲ್ಲಿ ಗುಂಡಿ ಅಗೆದು ಕಾಮಗಾರಿ ನಡೆಸಿ ಅದನ್ನು ಸರಿಯಾಗಿ ಮುಚ್ಚದೆ ಇರುವುದು ನಿರ್ಲಕ್ಷ್ಯವೇ ಸರಿ. ಪೊಲೀಸ್ ಠಾಣೆಯ ಮುಂಭಾಗ ಮತ್ತು ಆಲೆಟ್ಟಿ ತಿರುವಿನಲ್ಲಿ ಗುಂಡಿ ತೋಡಿ ಇದ್ದ ರಸ್ತೆಯನ್ನೇ ಹಾಳುಗೆಡಹಿದ್ದಾರೆ. ಪುಟ್ ಪಾತ್ ಕೂಡ ಅಲ್ಲಲ್ಲಿ ಕುಸಿದು ಬೀಳುತ್ತಿದ್ದು ಅವೈಜ್ಞಾನಿಕ ಕಾಮಗಾರಿ ಬಗ್ಗೆ ಅಧಿಕಾರಿಗಳು ಜನಪ್ರತಿನಿಧಿಗಳು ಕ್ರಮ ಕೈಗೊಳ್ಳುತ್ತಿಲ್ಲ