ಬಾಳುಗೋಡು ಗ್ರಾಮದ ಉಪ್ಪುಕಳದಲ್ಲಿ ಹಾನಿಗೊಂಡ ಕಾಲು ಸೇತುವೆ, ಪದಕದ ಮುಳುಗು ಸೇತುವೆ ಹಾಗೂ ಹರಿಹರದಲ್ಲಿ ಬರೆ ಕುಸಿತದಿಂದ ಹಾನಿಗೊಂಡ ತೇಜಕುಮಾರ್ ಕಜ್ಜೋಡಿಯವರ ಮನೆ ವೀಕ್ಷಣೆ ಮಾಡಿ ಮಾತನಾಡಿದರು. ಬಹಿಷ್ಕಾರದಿಂದ ಯಾವುದೇ ಅಭಿವೃದ್ಧಿ ಕಾರ್ಯ ಆಗುವುದಿಲ್ಲ. ಯಾರೂ ಕೂಡ ಗೊಂದಲಕ್ಕೆ ಒಳಗಾಗಬಾರದು. ಹಂತಹಂತವಾಗಿ ನಾವು ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತೇವೆ. ಈಗಾಗಲೇ ಇಲ್ಲಿಗೆ 3 ಸೇತುವೆ ನಿರ್ಮಾಣ ಮಾಡಲಾಗಿದೆ. ಈ ಸೇತುವೆ ಕೂಡ ಮುಂದಿನ ಮಾರ್ಚ್ ತಿಂಗಳೊಳಗೆ ಸೇತುವೆ ನಿರ್ಮಿಸಿ ಕೊಡುತ್ತೇವೆ ಭರವಸೆ ನೀಡಿದ್ದಾರೆ.
ಸ್ಥಳೀಯ ಬಿಜೆಪಿ ಮುಖಂಡ ಚಂದ್ರಹಾಸ ಶಿವಾಲ ಮಾತನಾಡಿ ಈ ಭಾಗಕ್ಕೆ ರಸ್ತೆ ನಿರ್ಮಿಸಲು ಅರಣ್ಯ ಇಲಾಖೆಯ ಜತೆಗೆ ಹೋರಾಟ, ರೂ. 27 ಲಕ್ಷದಲ್ಲಿ ವಿದ್ಯುತ್ ಲೈನ್ ಕಾಮಗಾರಿ, ಇಂಟರ್ ನೆಟ್ ವ್ಯವಸ್ಥೆ ಕಲ್ಪಿಸಲು ನಮ್ಮ ಜನಪ್ರತಿನಿಧಿಗಳು ಶ್ರಮಿಸಿದ್ದಾರೆ ಎಂದರು.
ಈ ಸಂದರ್ಭ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಜಿ.ಪಂ.ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುಳಿಯ ಕೇಶವ ಭಟ್, ಯುವ ಮೋರ್ಚಾದ ಸುನಿಲ್ ಕುಮಾರ್ ಕೇರ್ಪಳ, ಹರಿಹರಪಲ್ಲತ್ತಡ್ಕ ಗ್ರಾ.ಪಂ. ಅಧ್ಯಕ್ಷ ಜಯಂತ ಬಾಳುಗೋಡು, ಮಾಜಿ ಅಧ್ಯಕ್ಷ ಹಿಮ್ಮತ್ ಕಿರಿಭಾಗ, ಅಂಬಾದಾಸ್, ಮಾಧವ ಚಾಂತಾಳ, ರಾಧಾಕೃಷ್ಣ ಕಟ್ಟೆಮನೆ, ಶಿಲ್ಪಾ ಕೊತ್ನಡ್ಕ, ಬಿಂದು ಗುಂಡಿಹಿತ್ಲು, ಪಿಡಿಓ ಮಣಿಯಾನ ಪುರುಷೋತ್ತಮ ಉಪಸ್ಥಿತರಿದ್ದರು.
- Thursday
- November 21st, 2024