ಬಳ್ಪದ ಬೊಗಾಯನ ಕೆರೆಯ ತಡೆಗೋಡೆಯ ಕಲ್ಲು ಕುಸಿತ ಕಳಪೆ ಕಾಮಾಗಾರಿಯಿಂದ ಅಲ್ಲ. ಕೆರೆಯ ಒಂದು ಸೈಡ್ ಗುಡ್ಡವಿದ್ದು ಆ ಭಾಗದಲ್ಲಿ ಮಳೆಯಿಂದ ಮಣ್ಣಿನ ಒಸರು ಹೆಚ್ಚಾಗಿ ಮಣ್ಣು ಸಮೇತ ಕಲ್ಲು ಕುಸಿದಿದೆ. ಇಲ್ಲಿನ ಕಾಮಗಾರಿ ಎಸ್ಟಿಮೇಟ್‌ನಲ್ಲಿರುವಂತೆ ಮಾಡಲಾಗಿದೆ ಎಂದು ಗ್ರಾಮ ವಿಕಾಸ ಪ್ರತಿಷ್ಠಾನ ಅಧ್ಯಕ್ಷ ವಿನೋದ್ ಬೊಳ್ಮಲೆ ಹೇಳಿದರು.
ಅವರು ಬಳ್ಪ ಬಿ ಜೆ ಪಿ ಗ್ರಾಮ ಸಮಿತಿ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.
ಬಳ್ಪ ಬೊಗಾಯನ ಕೆರೆ ಅಭಿವೃದ್ಧಿ ವಿಚಾರ ಕಳಪೆ ಕಾಮಗಾರಿಯಾಗಿದ್ದು ತಡೆ ಗೋಡೆಯ ಕಲ್ಲುಗಳು ಜಾರಿ ಬಿದ್ದಿರುವ ವಿಚಾರ ಮಾದ್ಯಮಗಳಲ್ಲಿ ವರದಿಯಾಗಿದೆ.
ಕೆರೆಯ ಅಡಿಭಾಗದಲ್ಲಿ ಭೀಮ್‌ಗಳಿದ್ದು ಅಲ್ಲಲ್ಲಿ ೨೮ ಫಿಲ್ಲರ್‌ಗಳಿವೆ ಕಳಪೆಯ ಮಾತೇ ಇಲ್ಲ. ೪೦ % ಕಮಿಷನ್ ಆರೋಪ ಹೊರಿಸುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್ ಅದನ್ನೇ ಮಾಡಿದ್ದು ಈಗ ಬೇರೆಯವರಿಗೆ ಬೆರಳು ತೋರಿಸುತ್ತಿದೆ ಎಂದರು.
೨ ಕೋಟಿ ಕಾಮಗಾರಿ ವೆಚ್ಚ. ೩೬೫ ಮೀ ಉದ್ದ ಇದೆ.೨೦ ಅಡಿ ಆಳ ಇದೆ. ಕೆರೆ ಮೇಲಿನ ಭಾಗದವರಿಗೆ ಯಾರಿಗೆ ತೊಂದರೆ ಆದರೂ ಅದು ಶಾಶ್ವತ ಅಲ್ಲ. ಕಾಮಗಾರಿ ನಡೆಯುತ್ತಿದೆ ಸ್ವಲ್ಪ ತೊಂದರೆ ಆಗಬಹುದು ಎಂದರು. ಹಿಂದೆ ಕಾಂಗ್ರೆಸ್ ಆಡಳಿತದ ವೇಳೆ ೫ ಲಕ್ಷ ವೆಚ್ಚ ಮಾಡಿ ಹೂಳು ತೆಗೆದು ಕೆರೆ ದಂಡೆಯಲ್ಲೆ ಹಾಕಿದ್ದಾರೆ ಅದು ಮತ್ತೆ ಕೆರೆ ಸೇರಿತ್ತು ಎಂದರು. ಕೆರೆ ಇನ್ನೂ ಲೋಕಾರ್ಪಣೆ ಆಗಿಲ್ಲ. ಕಾಮಗಾರಿಯ ಯಾವುದೇ ಬಿಲ್ ಪಾವತಿಯೂ ಆಗಿಲ್ಲ ಯಾರೂ ವೃಥಾ ಆರೋಪ ಮಾಡಬೇಡಿ ಎಂದರು.
ಬಿ ಜೆ ಪಿ ಮಂಡಲ ಸಮಿತಿ ಕಾರ್ಯದರ್ಶಿ ಸುಬ್ರಹ್ಮಣ್ಯ ಕುಳ, ಗ್ರಾಮ ವಿಕಾಸ ಸಂಯೋಜಕ ಬೆಳ್ಯಪ್ಪ ನಾದೂರು, ಬಳ್ಪ
ಗ್ರಾ ಪಂ ಸದಸ್ಯ ಹರ್ಷಿತ್ ಕಾರ್ಜ, ಪಂಜ ಸೊಸೈಟಿ ನಿರ್ದೇಶಕ ಶ್ರೀಕೃಷ್ಣ ಭಟ್ ಪಟೋಳಿ, ಪಂಜ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ರೈ, ಬಳ್ಪ ಗ್ರಾ.ಪಂ ಮಾಜಿ ಸದಸ್ಯ ರಮಾನಂದ ಎಣ್ಣೆಮಜಲು, ಬಿ ಜೆ ಪಿ ಕಾರ್ಯಕರ್ತ ಹರೀಶ್ ಕಾರ್ಜ, ದೇವರಾಜ್ ಕೊಠಾರಿ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.