ಮಳೆಗಾಲ ಆರಂಭ ದಿನಗಳಿಂದ ಆರಂತೋಡು, ತೊಡಿಕಾನ ಸಂಪಾಜೆ ಗ್ರಾಮಗಳಲ್ಲಿ ನಿರಂತರ ವಿದ್ಯುತ್ ವ್ಯತ್ಯಯ ಆಗುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದ ಜನಪ್ರತಿನಿಧಿಗಳು ಸಚಿವ ಎಸ್. ಅಂಗಾರರಿಗೆ ಮನವಿ ಮಾಡಿದ್ದರು.
ಇದಕ್ಕೆ ಸ್ಪಂದಿಸಿದ ಸಚಿವರು ಮೆಸ್ಕಾಂ ನ ಸಹಾಯಕ ತಾಂತ್ರಿಕ ಅಧಿಕಾರಿ ಸುಪ್ರಿತ್ ಅವರನ್ನು ಕಛೇರಿಗೆ ಕರೆಸಿ ನಿರಂತರ ವಿದ್ಯುತ್ ನೀಡಲು ಆಗಬೇಕಾಗಿರುವ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲು ಆದೇಶಿಸಿದರು. ಮುಖ್ಯವಾಗಿ ಸುಳ್ಯದಿಂದ ಸಂಪಾಜೆ ವರೆಗೆ ಕ್ರೇನ್ ಮೂಲಕ ಟ್ರೀ ಕಟ್ಟಿಂಗ್ ಮಾಡುವುದು, ತೊಡಿಕಾನದಲ್ಲಿ ವಿದ್ಯುತ್ ಇಲ್ಲದಿದ್ದರೆ ಮೊಬೈಲ್ ನೆಟ್ವರ್ಕ್ ಸಮಸ್ಯೆ, ಸುಳ್ಯ ಪೀಡ ರ್ ಸಮಸ್ಯೆಯಾದರೆ ಆರಂತೋಡು, ತೊಡಿಕಾನ ಗ್ರಾಮಗಳಿಗೆ ಮರ್ಕಂಜ ಅಡ್ತಲೆ ಲಿಂಕ್ ಲೈನ್ ಮೂಲಕ ಗುತ್ತಿಗಾರು ಪೀಡರ್ ನಿಂದ ವಿದ್ಯುತ್ ಸರಬರಾಜು ವ್ಯವಸ್ಥೆ ಮಾಡುವುದು ಮತ್ತು ರೆಂಜಾಳ ಪಿಂಗಾರತೋಟ ಲಿಂಕ್ ಲೈನ್ ಬಳಕೆ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಿದರು. ಈ ಸಂದರ್ಭದಲ್ಲಿ ಸುಳ್ಯ ಬಿ.ಜೆ.ಪಿ ಮಂಡಲ ಸಮಿತಿ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ಪ್ರದಾನ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ, ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾದ ಕೇಶವ ಭಟ್ ಮುಳಿಯ ಮತ್ತು ಆರಂತೋಡು ಶಕ್ತಿ ಕೇಂದ್ರದ ಪ್ರಮುಖರು, ಪಂಚಾಯತ್ ಸದಸ್ಯರಾದ ಕೇಶವ ಅಡ್ತಲೆ ಉಪಸ್ಥಿತರಿದ್ದರು.
- Sunday
- November 24th, 2024