Ad Widget

ಶಿಥಿಲಗೊಂಡಿರುವ ಕೊಡಿಯಾಲ – ಪೆರುವಾಜೆ ಸಂಪರ್ಕಿಸುವ ಸಾರಕೆರೆ ಕಿಂಡಿ ಅಣೆಕಟ್ಟು, ಸರ್ವಋತು ಸೇತುವೆಗಾಗಿ ನಾಗರಿಕರ ಒತ್ತಾಯ

ಕೊಡಿಯಾಲ – ಪೆರುವಾಜೆ ಗ್ರಾಮಗಳನ್ನು ಸಂಪರ್ಕಿಸುವ ಸಾರಕೆರೆ ಎಂಬಲ್ಲಿ ಸುಮಾರು 45 ವರ್ಷಗಳ ಹಿಂದೆ ನಿರ್ಮಿಸಲಾದ ಕಿಂಡಿ ಅಣೆಕಟ್ಟು ಈಗ ಸಂಪೂರ್ಣ ಶಿಥಿಲಗೊಂಡಿದ್ದು, ಸದ್ರಿ ಅಣೆಕಟ್ಟಿನ ಮೇಲೆ ಇರುವ ಕಾಲುದಾರಿಯಲ್ಲಿ ನಡೆದುಕೊಂಡು ಹೋಗುವುದು ದುಸ್ತರವಾಗಿದೆ.

. . . . . . .

ಈ ಕಾಲುದಾರಿಯಲ್ಲಿ ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಕೊಡಿಯಾಲ ಗ್ರಾಮದ ಅನಗುರಿ, ಕೆಡೆಂಜಿಮೊಗ್ರು, ಬೇರ್ಯ ಉಡುಕಿ ಕಾಲೋನಿಯ ನಾಗರಿಕರು ಹಾಗೂ ಪೆರುವಾಜೆಯ ನಾಗರಿಕರು ತಮ್ಮ ದಿನನಿತ್ಯದ ವ್ಯವಹಾರ ಹಾಗೂ ಕೃಷಿ ಚಟುವಟಿಕೆಗಳಿಗೆ ಈ ಕಿಂಡಿ ಅಣೆಕಟ್ಟನ್ನೇ ಅವಲಂಬಿಸಿದ್ದಾರೆ.

ಈ ಕಿಂಡಿ ಅಣೆಕಟ್ಟು ಕೊಡಿಯಾಲ ಹಾಗೂ ಪೆರುವಾಜೆ ಗ್ರಾಮಗಳಿಗೆ ಸಂಪರ್ಕ ಕೊಂಡಿಯಾಗಿದ್ದು, ಮಳೆಗಾಲದಲ್ಲಿ ಹೊಳೆಯಲ್ಲಿ ನೀರು ಹೆಚ್ಚಾಗಿ ಕಿಂಡಿ ಅಣೆಕಟ್ಟು ಮುಳುಗಡೆಯಾಗುವುದರಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಸ್ಥಳೀಯ ನಾಗರಿಕರು ಸಂಬಂಧಪಟ್ಟ ಇಲಾಖೆಗೆ ಹಲವು ಬಾರಿ ಮನವಿಯನ್ನು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕಿಂಡಿ ಅಣೆಕಟ್ಟು ಕೊಡಿಯಾಲ ಹಾಗೂ ಪೆರುವಾಜೆ ಗ್ರಾಮಗಳ ವ್ಯಾಪ್ತಿಗೆ ಒಳಪಟ್ಟಿದ್ದು, ಆದಷ್ಟು ಬೇಗ ಈ ಅಣೆಕಟ್ಟನ್ನು ಮೇಲ್ದರ್ಜೆಗೇರಿಸಿ, ಸರ್ವಋತು ಸೇತುವೆಯನ್ನು ನಿರ್ಮಾಣ ಮಾಡಬೇಕೆಂಬುದು ಈ ಭಾಗದ ಜನರ ಬಹುಕಾಲದ ಬೇಡಿಕೆಯಾಗಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!