ತರವಾಡು ಮನೆಗಳು ಮಕ್ಕಳಿಗೆ ಧಾರ್ಮಿಕ ಶಿಕ್ಷಣ, ಶಿಸ್ತು, ಶ್ರದ್ಧೆಯನ್ನು ಕಳುಹಿಸುವ ಶ್ರದ್ಧಾ ಕೇಂದ್ರವಾಗಲಿ

ನಮ್ಮ ತುಳುನಾಡಿನಲ್ಲಿ ತರವಾಡು ಮನೆಗೆ ಭಾರಿ ಮಹತ್ವವಿದೆ . ತರವಾಡು ಮನೆಯಿಲ್ಲದ ಕುಟುಂಬವಿರದು. ತರವಾಡು ಮನೆಯು ತನ್ನ ಕುಟುಂಬದ ಮನೆಗಳ ದೈವಗಳ ಕಾರ್ಯ ದೇವರ ಕಾರ್ಯಗಳ ಮುಂದುವರಿಕೆಗೆ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. ತರವಾಡು ಮನೆಯ ಯಜಮಾನನು ತನ್ನದೆ ಆದ ಗೌರವವನ್ನು ಹೊಂದಿದ್ದು , ಕುಟುಂಬ ಸದಸ್ಯರನ್ನು ಪ್ರೀತಿ , ಸಹನೆ , ತಾಲ್ಮೆಯಿಂದ ಸಮರ್ಪಕವಾಗಿ ನಿಭಾಯಿಸುವ ಶಕ್ತಿ ಹೊಂದಿರುತ್ತಾನೆ. ಮನೆಯ ಹೆಣ್ಣು / ಗಂಡು ಮಕ್ಕಳಿಗೆ ಮದುವೆ ವಿಚಾರಬಂದಾಗ ಅವಳು/ ಅವನು ಯಾವ ಮನೆತದನದ ಹೆಣ್ಣು / ಗಂಡು ಎಂದು ವಿಚಾರಿಸುವುದು ಸಾಮಾನ್ಯವಾಗಿದೆ. ಈ ಹಿಂದಿನ ಕಾಲದ ಮನೆತನಗಳು ತುಳುನಾಡಿನಲ್ಲಿ ಗತ ವೈಭವವನ್ನು ಸಾರಿವೆ. ಉದಾ= ಗುರಿಕಾರ ಮನೆ , ಗರಡಿ ಮನೆ, ಬಾರಿಕೆ ಮನೆ , ಗುತ್ತು ಮನೆ , ಭಂಡಾರ ಮನೆ , ಲೆಪ್ಪುದ ಮನೆ ಇತ್ಯಾದಿ . ಹಿಂದಿನ ಕಾಲದಲ್ಲಿ ಕುಟುಂಬದೊಳಗಿನ ಯಾವುದೆ ಗಲಾಟೆ ಅಸಮಾಧಾನವಿದ್ದರೂ ಹಿರಿಯರೂ ತರವಾಡು ಮನೆಯಲ್ಲಿ ಪಂಚಾತಿಗೆ ಮಾಡಿ ಮುಗಿಸುತ್ತಿದ್ದರು. ಒಂದು ತರವಾಡು ಮನೆ ಆಗಬೇಕಾದರೆ ಒಂದೆ ಬರಿಯ ಆರೇಳು ಕವಳುಗಳು ಸೇರಬೇಕು. ತರವಾಡು ಮನೆ ಅಂದ ಮೇಲೆ ಅಲ್ಲಿ ಕುಟುಂಬಕ್ಕೆ ಸೇರಿದ ಧರ್ಮ ದೈವ ಮತ್ತು ಉಪದೈವಗಳ ಭಂಡಾರ ಇರುವ ಚಾವಡಿ ಹಾಗೂ ಆ ಕುಟುಂಬಕ್ಕೆ ಸಂಬಂಧಿಸಿದ ಮುಡಿಪು ಅಲ್ಲಿರುತ್ತದೆ. ಕೆಲವು ಕಡೆ ನಾಗ ಬನ ಕೂಡ ಕಾಣಬಹುದು. ನಮ್ಮ ಹಿರಿಯರು ಎಲ್ಲದಕ್ಕೂ ಕಟ್ಲೆ – ಕಟ್ಟು ಪಾಡುಗಳನ್ನು ಮಾಡಿದ್ದಾರೆ. ಸಿಕ್ಕ ಸಿಕ್ಕಲ್ಲಿ ಕುಟುಂಬದ ದೈವಗಳನ್ನು ಆರಾಧನೆ ಮಾಡುವ ಹಾಗಿಲ್ಲ , ಮುಡಿಪು ಇಡುವ ಹಾಗಿಲ್ಲ ‌. ತರವಾಡು ಮನೆಯಲ್ಲಿ ಒಂದೆ ಕಡೆ ಸೇರಿ ಪೂಜ ಕೈಂಕರ್ಯಗಳನ್ನು ಮಾಡುವುದು ಪದ್ಧತಿ. ಈವಾಗ ಮುಂದುವರಿದು ತರವಾಡು ಮನೆ ಹೋಗಿ ಟ್ರಸ್ಟ್ ಗಳಾಗಿ ಬದಲಾವಣೆ ಹೊಂದುತ್ತಿವೆ…!!!

. . . . . . . . .

ತರವಾಡು ಮನೆಯಲ್ಲಿ ನಾವು ಹೇಗಿರಬೇಕು

. . . . . . .

ನಮ್ಮ ತರವಾಡಿನ ದೈವಗಳು ಗಂಟೆ , ಜಾಗಟೆ , ಆರತಿ ತಟ್ಟೆಗೆ ತಲೆದೂಗುವ ದೈವಗಳು ಅಲ್ಲ . ಬದಲಾಗಿ ದೈವಗಳು ನಮ್ಮ ನಿಷ್ಕಲ್ಮಷ ಭಕ್ತಿ , ಕುಟುಂಬದ ಯಜಮಾನನ ಭಕ್ತಿಯ ಮದಿಪು , ನಾವು ಮಾಡಿದ ಕೆಲಸದ ಸೇವೆಗೆ ತಲೆದೂಗುತ್ತವೆ. ತರವಾಡು ಮನೆಯಲ್ಲಿ‌ ಕೈ ಮುಗಿದು ಮೊಬೈಲ್ ಫಟೊ ವೀಡಿಯೋ ಚಿತ್ರೀಕರಣ ಮಾಡಿ ಸ್ಟೈಟಸ್ ಹಾಕುವುದಕ್ಕೆ ಸೀಮಿತ ಆಗಿರಬಾರದು.ತರವಾಡು ಮನೆಯಲ್ಲಿ ದೈವಗಳ ಸಿರಿ ಸಿಂಗಾರದ ನೇಮ , ಪತ್ತನಾಜೆ ತಂಬಿಲ, ದೀಪಾವಳಿ ತಂಬಿಲ ಮುಂತಾದ ದಿನಗಳಲ್ಲಿ ತರವಾಡು ಮನೆಯಲ್ಲಿ ತಮ್ಮಿಂದಾದ ಸೇವೆ ಗೈದರೆ ಉತ್ತಮ.

ತರವಾಡು ಮನೆ ಹೇಗಿರಬೇಕು

ತರವಾಡು ಮನೆ ಕುಟುಂಬದ ಸದಸ್ಯರಿಗೆ ಸಂಸ್ಕೃತಿ – ಸಂಸ್ಕಾರ , ಶಿಸ್ತು , ಧಾರ್ಮಿಕ ಶಿಕ್ಷಣ ನೀಡುವ ಕೇಂದ್ರವಾಗಿರಬೇಕು . ಕುಟುಂಬದ ಒಳಗೆ ಯಾವುದೆ ರೀತಿಯ ಮನಸ್ತಾಪ , ಗಲಾಟೆಗಳಿದ್ದರೂ ಅದನ್ನು ಪರಿಹರಿಸುವ ತಾಣವಾಗಿರಬೇಕು . ಕುಟುಂಬದ ಸದಸ್ಯರು ಸಾಮಾಜ ಒಪ್ಪದ ಕೆಲಸಗಳಲ್ಲಿ ಭಾಗಿಯಾದಲ್ಲಿ‌ ಅವರನ್ನು ಸರಿಪಡಿಸುವ ಕೆಲಸವಾಗಬೇಕು. ಅಳಿದು ಹೋದ ತುಳುನಾಡಿನ ಸಂಸ್ಕೃತಿಯನ್ನು ಮಕ್ಕಳಿಗೆ ಮತ್ತೆ ನೆನಪಿಸುವ ತಾಣವಾಗಬೇಕು . ತರವಾಡು ಮನೆಯ ಯಜಮಾನ ಕುಟುಂಬದ ಸದಸ್ಯರ ಜೊತೆ ಪ್ರೀತಿ, ಸಹನೆ , ಸಹಬಾಳ್ವೆ ಯೊಂದಿಗೆ ಹೊಂದಿಕೊಂಡಿರಬೇಕು . ಕುಟುಂಬದೊಳಗಿನ ಕಿರಿಯರನ್ನು , ಮಕ್ಕಳನ್ನು ತರವಾಡು ಮನೆಯಲ್ಲಿ ಒಗ್ಗೂಡಿಸಿ ಧಾರ್ಮಿಕ ಶಿಕ್ಷಣ , ಸಮಾಜದಲ್ಲಿ ಆಗುತ್ತಿರುವ ಬದಲಾವಣೆಗಳು , ಸಮಯದಲ್ಲಿ ನಮ್ಮ ಜವಾಬ್ದಾರಿಯನ್ನು ತಿಳಿ ಹೇಳಬೇಕು . ತರವಾಡು ಮನೆಯಲ್ಲಿ ಬೇರೆ ಬೇರೆ ರೀತಿಯ ಕಾರ್ಯಕ್ರಮಗಳನ್ನು ಮಾಡುತ್ತಾ ಕುಟುಂಬ ಸದಸ್ಯರನ್ನು ಒಗ್ಗೂಡಿಸಿ ಕ್ರೀಯಾ ಶೀಲರಾಗಿರಬೇಕು.

ಈ ರೀತಿಯ ಅಚ್ಚು ಕಟ್ಟಾದ ವ್ಯವಸ್ಥೆಯನ್ನು ಪ್ರತಿಯೊಂದು ತರವಾಡು ಮನೆಯು ಹೊಂದಿದರೆ ನಮ್ಮ ಸಮಾಜವು ಉತ್ತಮವಾಗಿರುತ್ತದೆ . ನಮ್ಮ ಕುಟುಂಬ ಸದಸ್ಯರು ಕೋರ್ಟ್, ಪೋಲಿಸ್ ಠಾಣೆಗಳಿಗೆ ಅಲೆದಾಡುವ ಸಂದರ್ಭ ಕಡಿಮೆ ಆಗಬಹುದು. ಸಮಾಜದಲ್ಲಿ ಆಗುತ್ತಿರುವ ಅನಾಚಾರ ,ಅತ್ಯಾಚಾರದಂತಹ ಹೀನ ಕೃತ್ಯಗಳು ಕಡಿಮೆ ಆಗಬಹುದು ಎಂಬುವುದು ನನ್ನ ಅಭಿಪ್ರಾಯ.
✍️ ಭಾಸ್ಕರ ಜೋಗಿಬೆಟ್ಟು ( ಕೊಳೆಂಜಿಕೋಡಿ ಗುತ್ತು)


Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading