ಅರಣ್ಯ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದವರಿಗೆ ರಾಜ್ಯ ಸರಕಾರ ಕೊಡಮಾಡುವ ೨೦೨೧ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಸುಬ್ರಹ್ಮಣ್ಯ ವಲಯದ ಫಾರೆಸ್ಟರ್ ಸಂತೋಷ್ ಶಿವಪ್ಪ ದಮ್ಮಸೂರ್ ಆಯ್ಕೆಯಾಗಿದ್ದಾರೆ.ರಾಜ್ಯದ ಅರಣ್ಯ ಇಲಾಖೆಯಲ್ಲಿ ಟ್ಟು ೨೫ ಮಂದಿಗೆ ಮುಖ್ಯಮಂತ್ರಿ ಪದಕ ನೀಡಲಾಗುತ್ತಿದ್ದು ಸುಳ್ಯ ಅರಣ್ಯ ಇಲಾಖೆಯಿಂದ ಸಂತೋಷ್‌ರವರು ಸಂಶೋಧನಾ ವಿಭಾಗದಲ್ಲಿ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ.
ಸಂತೋಷ್ ರವರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಾರುಗೊಪ್ಪ ಗ್ರಾಮದವರು. ವಿದ್ಯಾಭ್ಯಾಸದ ಬಳಿಕ ೨೦೦೯ರಲ್ಲಿ ಉಪ್ಪಿನಂಗಡಿ ವಲಯ ಶಿರಾಡಿ ಯಲ್ಲಿ ಅರಣ್ಯರಕ್ಷಕರಾಗಿ ಕೆಲಸಕ್ಕೆ ಸೇರಿದ್ದ ಇವರು, ೨೦೧೩ರಲ್ಲಿ ಪಂಜ ವಲಯಕ್ಕೆ ವರ್ಗಾವಣೆಗೊಂಡರು. ೨೦೨೦ರಲ್ಲಿ ಉಪವಲಯಾರಣ್ಯಾಧಿಕಾರಿಯಾಗಿ ಭಡ್ತಿಗೊಂಡು ಸುಬ್ರಹ್ಮಣ್ಯ ವಲಯಕ್ಕೆ ಬಂದರು. ೨೦೨೧ರ ಸೆಫ್ಟೆಂಬರ್ ತಿಂಗಳಿಂದ ಕೇಂದ್ರಿಯ ಮರಗಳ ಸಂಗ್ರಹಾಲಯ ನೆಟ್ಟಣದಲ್ಲಿ ನಿಯೋಜನೆಯ ಮೇಲೆ ಕರ್ತವ್ಯದಲ್ಲಿದ್ದಾರೆ.