ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು ಇಲ್ಲಿ ಮೇ.28 ರಂದು ಎಸ್.ಡಿ.ಎಂ.ಸಿ ಮತ್ತು ವಿದ್ಯಾರ್ಥಿಗಳ ಪೋಷಕರೊಂದಿಗೆ ಶ್ರಮದಾನ ನಡೆಯಿತು. ಶ್ರಮದಾನದಲ್ಲಿ ಶಾಲೆಯ ಸುತ್ತಮುತ್ತಲಿನ ಕಾಡು ಕಡಿಯಲಾಯಿತು. ಅಡಿಕೆ ತೋಟಕ್ಕೆ ಸೊಪ್ಪು, ಮಿಷನ್ ನಿಂದ ಹುಲ್ಲು ಕತ್ತರಿಸಲಾಯಿತು ಹಾಗೂ ಶಾಲೆಯ ಸುತ್ತಲಿನ ಮಳೆಗಾಲದ ನೀರು ಹರಿದು ಹೋಗಲು ಚರಂಡಿಯನ್ನು ಮಾಡಲಾಯಿತು. ಶ್ರಮದಾನದ ನಂತರ ಎಸ್.ಡಿ.ಎಂ.ಸಿ ಹಾಗೂ ಪೋಷಕರ ಸಭೆ ನಡೆಯಿತು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪೋಷಕರು, ಎಸ್.ಡಿ.ಎಂ.ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಹಾಗೂ ಗುತ್ತಿಗಾರು ಗ್ರಾಮ ಪಂಚಾಯತ್ ಸದಸ್ಯರುಗಳಾದ ವಿಜಯ ಕುಮಾರ್ ಚಾರ್ಮತ ಹಾಗೂ ಹರೀಶ್ ಕೊಯಿಲ ಅಂಜೇರಿ, ಶಾಲಾ ಮುಖ್ಯೋಪಾಧ್ಯಾಯರಾದ ಚಂದ್ರಶೇಖರ ಪಾರೆಪ್ಪಾಡಿ, ಶಾಲಾ ಶಿಕ್ಷಕರುಗಳಾದ ಕುಶಾಲಪ್ಪ ತುಂಬತ್ತಾಜೆ, ಸುಧಾರಾಣಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ವರದಿ :- ಉಲ್ಲಾಸ್ ಕಜ್ಜೋಡಿ