ಪ್ರಮುಖ ಕೋಳಿ ಸಾಕಾಣಿಕೆ ಕಂಪೆನಿಯಾಗಿರುವ ಮಾ. ಇಂಟಿಗ್ರೇಶನ್ ಇದರ ಒಪ್ಪಂದದ ಪ್ರಕಾರ ಕೋಳಿ ಸಾಕಾಣಿಕೆಗೆ ಪಡೆದ ಫುಡ್ ಅನ್ನು ಅಕ್ರಮವಾಗಿ ಬೇರೆ ಕೋಳಿ ಫಾರ್ಮ್ ಗೆ ಮಾರಾಟ ಮಾಡುತ್ತಿರುವ ವ್ಯಕ್ತಿಯ ಬಗ್ಗೆ ಕಂಪೆನಿಯ ಅಧಿಕಾರಿಗಳು ಪೋಲೀಸರಿಗೆ ದೂರು ನೀಡಿದ ಘಟನೆ ಸುಳ್ಯದಿಂದ ವರದಿಯಾಗಿದೆ. ಐವರ್ನಾಡು ನಿವಾಸಿ ಪುರುಷೋತ್ತಮ ಎಂಬವರು ಮಾ. ಇಂಟಿಗ್ರೇಶನ್ ನ ಮುಖಾಂತರ ಒಪ್ಪಂದದ ಪ್ರಕಾರ ಕೋಳಿ ಸಾಕಾಣಿಕೆ ಮಾಡುತ್ತಿದ್ದರು. ಆದರೇ ಅವರಿಗೆ ಕೋಳಿ ಸಾಕಾಣಿಕೆಗೆ ನೀಡಿದ್ದ ಫುಡ್ ಅನ್ನು ಪೈಚಾರಿನ ಚಿಕನ್ ಸೆಂಟರ್ ಒಂದಕ್ಕೆ ಮಾರಾಟ ಮಾಡಿದ್ದರು. ಇದು ಒಪ್ಪಂದದ ಪ್ರಕಾರ ಅಕ್ರಮವಾಗಿದೆ ಎಂದು ಕಂಪೆನಿಯ ಅಧಿಕಾರಿಗಳು ಸುಳ್ಯ ಪೋಲಿಸರಿಗೆ ದೂರು ನೀಡಿದ್ದರು. ಈ ಬಗ್ಗೆ ಪೋಲೀಸರು ತನಿಖೆ ನಡೆಸಿದಾಗ ಪುರುಷೋತ್ತಮ ರವರು ತಪ್ಪನ್ನು ಒಪ್ಪಿಕೊಂಡು, ನಷ್ಟ ಪಾವತಿಸಿ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆಂದು ತಿಳಿದುಬಂದಿದೆ. ಒಪ್ಪಂದದ ಪ್ರಕಾರ ಕೋಳಿ ಸಾಕಾಣಿಕೆಗೆ ಪಡೆದ ಫುಡ್ ಅನ್ನು ಇತರರಿಗೆ ಮಾರಾಟ ಮಾಡುವುದು ಅಪರಾಧವಾಗಿದೆ.ಇಂತಹ ಕೃತ್ಯಕ್ಕೆ ಯಾರ ಸಹಕಾರ ನೀಡಬಾರದೆಂದು ಕಂಪೆನಿಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Thursday
- November 21st, 2024