Ad Widget

ಎಸ್.ಎಸ್.ಎಲ್.ಸಿ ಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾದ ಸಾತ್ವಿಕ್.ಹೆಚ್.ಎಸ್ ಗೆ ಗಣಿತ ಸಂಶೋಧಕನಾಗುವ ಆಸೆ

ಈ ಸಲದ ಎಸ್.ಎಸ್.ಎಲ್.ಸಿ ಫಲಿತಾಂಶ ಹೊರಬಿದ್ದಿದ್ದು ಕರ್ನಾಟಕ ಪಬ್ಲಿಕ್ ಸ್ಕೂಲ್(ಕೆ.ಪಿ.ಎಸ್) ಬೆಳ್ಳಾರೆಯ ವಿದ್ಯಾರ್ಥಿಯಾದ ಸಾತ್ವಿಕ್.ಹೆಚ್.ಎಸ್ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಮೂಡಿಬಂದಿದ್ದಾರೆ. ಅಮರಸುದ್ದಿಗೆ ಪ್ರತಿಕ್ರಿಯಿಸಿರುವ ವಿದ್ಯಾರ್ಥಿ ಸಾತ್ವಿಕ್.ಹೆಚ್.ಎಸ್ ಭವಿಷ್ಯದಲ್ಲಿ ಗಣಿತ ಸಂಶೋಧಕನಾಗುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಕಳಂಜ ಗ್ರಾಮದ ಕಜೆಮೂಲೆ ಡಾ.ಶಶಿಧರ್.ಹೆಚ್.ಎಸ್ ಹಾಗೂ ಡಾ.ಅನುಪಮಾ ಶಶಿಧರ್ ದಂಪತಿಗಳ ಸುಪುತ್ರರಾಗಿರುವ ಇವರು ಪ್ರಾಥಮಿಕ ಶಿಕ್ಷಣವನ್ನು ಸ.ಹಿ.ಪ್ರಾ.ಶಾಲೆ ಶೇಣಿ, ಚೊಕ್ಕಾಡಿ ಭಗವಾನ್ ಶ್ರೀ ಸತ್ಯಸಾಯಿ ವಿದ್ಯಾಕೇಂದ್ರದಲ್ಲಿ ಪಡೆದಿದ್ದಾರೆ. 6ನೇ ತರಗತಿಯಿಂದ ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ದಾಖಲಾಗಿದ್ದು, ಇಂದು ಪ್ರಕಟಗೊಂಡ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!