ಬೇಂಗಮಲೆಯ ಪರಿಸರವನ್ನು ಸ್ವಚ್ಛವಾಗಿರಿಸಲು ಐವರ್ನಾಡು ಗ್ರಾಮ ಪಂಚಾಯತ್ ಸತತ ಪ್ರಯತ್ನ ಮಾಡುತ್ತಿದ್ದರೂ ಕೆಲವರ ಮಾತ್ರ ಅನಾಗರಿಕತೆಯನ್ನು ಬಿಡುತ್ತಿಲ್ಲ. ಸರಕಾರದ ಕ್ಷೀರ ಭಾಗ್ಯ ಯೋಜನೆಯಡಿ ಉಚಿತವಾಗಿ ವಿತರಣೆಯಾಗಿದ್ದ ಹಾಲಿನ ಪುಡಿಯ ಪ್ಯಾಕೇಟನ್ನು ಬೇಂಗಮಲೆಯಲ್ಲಿ ಎಸೆದಿರಿವುದನ್ನು ಪಿಡಿಓ ಶ್ಯಾಮ್ ಪ್ರಸಾದ್ ಪರಿಶೀಲನೆಗೆ ತೆರಳಿದಾಗ ಕಂಡುಬಂದಿದೆ.
ಸರಕಾರ ಉಚಿವಾಗಿ ನೀಡುವುದು ತಪ್ಪೇ, ಅಥವ ಕಳಪೆ ಆಹಾರ ನೀಡುತ್ತಿದೆಯೇ ಎಂಬ ಸಂಶಯ ಕೂಡ ಜನರಲ್ಲಿ ಮೂಡುವಂತಾಗಿದೆ. ಈ ಬಗ್ಗೆ ಕೂಡ ಸಂಬಂಧಿಸಿದವರು ಗಮನ ಹರಿಸುವುದು ಒಳಿತು.
- Tuesday
- December 3rd, 2024