ಕಡಬ ತಾಲೂಕಿನ ಚಾರ್ವಾಕ ಕಪಿಲೇಶ್ವರ ಸಿಂಗಾರಿ ಮೇಳವು ಕಳೆದ ಮೇ.7ರಿಂದ ಮೇ.10 ರವರೆಗೆ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ನಡೆಯುತ್ತಿರುವ ಗ್ರಾಮದೇವತೆ ಊರ ಜಾತ್ರೆಯಲ್ಲಿ ಭಾಗವಹಿಸಿ ಅಲ್ಲಿನ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಸುಮಾರು 1ಲಕ್ಷಕ್ಕೂ ಅಧಿಕ ಜನ ಸೇರಿದ ಜಾತ್ರೆಯಲ್ಲಿ ಊರ ಕಾಯುವ ದೇವಿಯ ಮೆರವಣಿಗೆ ಬಹಳ ವಿಜೃಂಭಣೆಯಿಂದ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ರಾಜ್ಯದ ವಿವಿಧ ಕಲಾತಂಡಗಳನ್ನು ಆಹ್ವಾನಿಸುವ ಈ ಜಾತ್ರೆಗೆ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಪ್ರಸಿದ್ಧ ಸಿಂಗಾರಿ ಮೇಳವಾದ ಕಪಿಲೇಶ್ವರ ಸಿಂಗಾರಿ ಮೇಳವನ್ನು ಆಯ್ಕೆ ಮಾಡಲಾಗಿತ್ತು.
ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದ ತಂಡವನ್ನು ಧಾರವಾಡ ಜನರು ಬಹಳ ಆದರತೆಯಿಂದ ಶಹಭಾಸ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.