ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ ವತಿಯಿಂದ ನಡೆಯುತ್ತಿರುವ ಸಂಸ್ಕಾರ ವಾಹಿನಿ ಶಿಬಿರದ
ಸಮಾಪನಾ ಸಮಾರಂಭವು ದಿನಾಂಕ ೦೯-೦೫-೨೦೨೨ ರಂದು ಸುಳ್ಯದ ಹಳೆಗೇಟಿನ ವಿದ್ಯಾನಗರದ ಶ್ರೀ ಕೇಶವಕೃಪಾ ಸಭಾಂಗಣದಲ್ಲಿ ನಡೆಯಿತು. ಸಮಾರಂಭದ ಸಭಾಧ್ಯಕ್ಷತೆಯನ್ನು ಶ್ರೀ ಗೋಪಾಲಕೃಷ್ಣ ಭಟ್
ಶಿವನಿವಾಸ ವಹಿಸಿದ್ದರು. ಸಪಾಮನಾ ಮುಖ್ಯ ಭಾಷಣವನ್ನು ವೇ| ಮೂ| ಅಭಿರಾಮ ಭಟ್ ಸರಳಿಕುಂಜ ಮಾತನಾಡುತ್ತಾ ಹಣ ಸಂಪಾದನೆಯೊಂದೇ ಜೀವನದ ಗುರಿಯಲ್ಲ. ಭಾರತೀಯ ಸಂಸ್ಕಾರ, ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳೋಣ ಹಾಗೂ ಪರಸ್ಪರರನ್ನು ಪ್ರೀತಿಸುವುದರ ಮೂಲಕ ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರಲು ಸಹಕಾರಿಯಾಗುತ್ತದೆ. ಇಂದಿನ ಮಕ್ಕಳೇ ಮುಂದಿನ ಭಾರತರತ್ನಗಳಾಗಬೇಕೆಂದು ಆಶಿಸಿದರು. ಸುಸಂಸ್ಕೃತವಾದ ವಿದ್ಯೆಯನ್ನು ಮಕ್ಕಳಿಗೆ ಕೊಡಿಸುವುದರ ಮೂಲಕ ಭಾರತ ಸತ್ಪ್ರಜೆಗಳನ್ನಾಗಿ
ನಿರ್ಮಾಣ ಮಾಡೋಣ ಎಂದು ಹೇಳಿದರು. ಮುಖ್ಯ ಅಭ್ಯಾಗತರಾಗಿ ನಿವೃತ್ತಾ ಶಿಕ್ಷಕಿ ಶ್ರೀಮತಿ ಅಂಬಾಬಾಯಿ ಭಾಗವಹಿಸಿದ ಎಲ್ಲಾ ಶಿಬಿರಾರ್ಥಿಗಳಿಗೂ ಅರ್ಹತಾ ಪತ್ರ ವಿತರಿಸಿದರು. ವೇದಿಕೆಯಲ್ಲಿ ಯೋಗ ಶಿಕ್ಷಕ ಸಂತೋಷ್ ಮುಂಡಕಜೆ ಹಾಗೂ ಪ್ರತಿಷ್ಠಾನದ ಗೌರವಾಧ್ಯಕ್ಷ ಗೋಪಾಲಕೃಷ್ಣ ಭಟ್ಉಪಸ್ಥಿತರಿದ್ದರು.
ಪ್ರಾರ್ಥನೆಯನ್ನು ಚಿ| ಅಶ್ವಿಜ್ ಆತ್ರೇಯ ನೆರವೇರಿಸಿದನು. ಪ್ರಾಸ್ತಾವಿಕ ಮಾತುಗಳೊಂದಿಗೆ ಅತಿಥಿಗಳನ್ನು ಪುರೋಹಿತ ನಾಗರಾಜ ಭಟ್ ಸ್ವಾಗತಿಸಿ, ಶ್ರೀದೇವಿ ನಾಗರಾಜ್ ಭಟ್ ನಿರೂಪಿಸಿ, ಧನ್ಯವಾದ
ಸಮರ್ಪಿಸಿದರು.
ಒಂದು ವಾರದ ಪರ್‍ಯಂತ ನಡೆದ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಭಗವದ್ಗೀತೆ, ಶ್ಲೋಕಗಳು, ಸಂಸ್ಕೃತ ಸುಭಾಷಿತಗಳು, ಆಶಯ ಗೀತೆ, ರಂಗವಲ್ಲಿ ಬಿಡಿಸುವ ವಿಧಾನ, ಪೇಪರ್ ಕಟ್ಟಿಂಗ್ ಮುಂತಾದ ವಿಷಯಗಳ
ಬಗ್ಗೆ ತಜ್ಞ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡಯಿತು. ಈ ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಶಿಬಿರಾರ್ಥಿಗಳಿಗೆ ಪಠ್ಯ ಪುಸ್ತಕಗಳೊಂದಿಗೆ ಉಚಿತ ಊಟ ಉಪಚಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.
- Thursday
- November 21st, 2024