ಪೆರಾಜೆಯ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ಸಂಘ ಇದರ ಆಶ್ರಯದಲ್ಲಿ ಪೆರಾಜೆಯ ಪಯಸ್ವಿನಿ ಸೇತುವೆ ಬಳಿ ಈಜು ತರಬೇತಿ ಶಿಬಿರದ ಉದ್ಘಾಟನೆ ನಡೆಯಿತು. ಶಿಬಿರವನ್ನು ಪೆರಾಜೆ ಶ್ರೀ ಶಾಸ್ತಾವು ದೇವಳದ ಮೊಕ್ತೇಸರ ವಿಶ್ವನಾಥ ಕುಂಬಳಚೇರಿ ಉದ್ವಾಟಿಸಿದರು. ಈ ಸಂದರ್ಭದಲ್ಲಿ ಸಂಘಟಕರಾದ ಪೆರಾಜೆ ಅಯ್ಯಪ್ಪ ದಿಪೋತ್ಸವ ಸಮಿತಿ ಕಾರ್ಯದರ್ಶಿ ಸುರೇಶ್ ಪೆರುಮುಂಡ, ನಿರ್ದೇಶಕ ರಾದ ಯುವಾನಂದ ಪೆರಂಗಜೆ ಹಾಗೂ ಪೋಷಕರು ಉಪಸ್ಥಿತರಿದ್ದರು. ರಾಷ್ಟಮಟ್ಟದ ಈಜು ತರಬೇತುದಾರರು ಮಾಹಿತಿ ನೀಡಿದರು.
- Tuesday
- December 3rd, 2024