ಕಳಂಜ ಗ್ರಾಮ ಪಂಚಾಯತ್ ನ ಪಂಚಮಿ ಸಂಜೀವಿನಿ ಒಕ್ಕೂಟ ಕಳಂಜ ಇದರ ಸದಸ್ಯರು ಒಟ್ಟಾಗಿ “ಕಾಯಕ ಶಕ್ತಿ” ಎಂಬ ತಂಡದೊಂದಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕಳಂಜ ಗ್ರಾಮದ ತಂಟೆಪ್ಪಾಡಿ -ಕಳಂಜ ತೋಡಿನ ಹೂಳೆತ್ತುವ ಕೆಲಸವನ್ನು ಲೋಕೇಶ್ ತಂಟೆಪ್ಪಾಡಿಯವರ ಮನೆಯ ಸಮೀಪದಿಂದ ಮೇ. 02ರಂದು ಆರಂಭಿಸಲಾಯಿತು.
ತಂಡದಲ್ಲಿ ಗ್ರಾಮ ಪಂಚಾಯಿತಿ ಸಂಜೀವಿನಿ ಒಕ್ಕೂಟದ ಎಲ್.ಸಿ.ಆರ್.ಪಿ ಯಶೋಧ ಮಣಿಮಜಲು, ಎಂ.ಬಿ.ಕೆ. ಪುಷ್ಪಾವತಿ, ಎಲ್.ಸಿ.ಆರ್.ಪಿ ಸೌಮ್ಯ, ಕಾಯಕ ತಂಡದ ಸದಸ್ಯರಾದ ಗೀತಾ,ರೇವತಿ, ಗಿರಿಜಾ,ಸುಮಿತ್ರಾ, ರೇವತಿ, ಸವಿತಾ ಕೆಲಸ ನಿರ್ವಹಿಸುತ್ತಿದ್ದಾರೆ.
ಕಳಂಜ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀಧರ್.ಕೆ.ಆರ್, ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು, ಪಂಚಾಯತ್ ಸಿಬ್ಬಂದಿ ಗಳು, ಲೋಕೇಶ್ ತಂಟೆಪ್ಪಾಡಿ ಮತ್ತು ಸ್ಥಳೀಯರು ಕಾಯಕ ತಂಡಕ್ಕೆ ಸಹಕಾರವನ್ನು ನೀಡುತ್ತಿದ್ದಾರೆ.