Ad Widget

ಸುಬ್ರಹ್ಮಣ್ಯ ಎಎಸ್‌ಐ ಚಂದಪ್ಪಗೆ ಬೀಳ್ಕೊಡುಗೆ ಸಮಾರಂಭ

ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚಂದಪ್ಪ ಅವರು ಮೇ 31 ರಂದು ನಿವೃತ್ತರಾದರು.ಪೋಲೀಸ್ ಇಲಾಖೆಯಲ್ಲಿ ನಿರಂತರ 33 ವರ್ಷ 7 ತಿಂಗಳು ಸೇವೆ ಸಲ್ಲಿಸಿ ನಿವೃತ್ತರಾದ ಚಂದಪ್ಪ ಅವರನ್ನು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಬೀಳ್ಕೊಡಲಾಯಿತು . ಸುಬ್ರಹ್ಮಣ್ಯ ಠಾಣಾಧಿಕಾರಿ ಓಮನಾ ಎನ್.ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು . ಸಮಾಜದ ಹಿತ ಕಾಪಾಡುವಲ್ಲಿ ಆರಕ್ಷರ ಪಾತ್ರ ಅನನ್ಯ.ಪ್ರಸ್ತುತ ಇರುವಂತಹ ಜಟಿಲ ಪರಿಸ್ಥಿತಿಯಲ್ಲಿ ಜನಹಿತಕ್ಕಾಗಿ ನೆರವೇರಿಸುವ ಕರ್ತವ್ಯವು ಜನಮಾನಸದಲ್ಲಿ ಸದಾ ಹಸಿರಾಗಿರುತ್ತದೆ.ನಿವೃತ್ತಿಯು ಸರಕಾರಿ ಇಲಾಖೆಯಲ್ಲಿ ಸರ್ವೇಸಾಮಾನ್ಯವಾದ ಸಂಗತಿ . ಕರ್ತವ್ಯದ ಅವಧಿಯಲ್ಲಿ ತೋರ್ಪಡಿಸಿದ ಕಾರ್ಯತತ್ಪರತೆಯು ಅಧಿಕಾರಿಗೆ ನಿವೃತ್ತಿಯ ನಂತರವೂ ಹೆಚ್ಚಿನ ಗೌರವವನ್ನು ನೀಡುತ್ತದೆ.ಪ್ರಾಮಾಣಿಕ ಮತ್ತು ಸೌಮ್ಯ ಭರಿತ ಸೇವೆಯ ಮೂಲಕ ಚಂದಪ್ಪ ಅವರು ಸರ್ವರಿಗೂ ಮಾದರಿಯಾಗಿದ್ದಾರೆ ಎಂದು ಈ ಸಂದರ್ಭದಲ್ಲಿ ಠಾಣಾಧಿಕಾರಿ ಓಮನಾ ಎನ್.ಕೆ. ಶುಭ ಹಾರೈಸಿದರು . ಸಂದರ್ಭದಲ್ಲಿ ಉಪಠಾಣಾಧಿಕಾರಿಗಳಾದ ಕರುಣಾಕರ , ಜಯಾನಂದ , ಸಿಬ್ಬಂದಿ ಗಳಾದ ಸಂಧ್ಯಾಮಣಿ , ರೋಹಿತಾಕ್ಷ , ನಿತ್ಯಾನಂದ ಮಹಮ್ಮದ್ ಇಕ್ಷಾಲ್ , ಸಂತೋಷ್ , ಪ್ರಕಾಶ್ , ಬೀಮಣ ಗೌಡ , ಸಿದ್ದಪ್ಪ ಹೂಗಾರ , ವಿಜಯ ಕುಮಾರ್‌ , ಬಸವರಾಜು , ಅರವಿಂದ , ವಿಠಲ , ಆಕಾಶ , ಕುಮಾರಸ್ವಾಮಿ , ಮಹಾಲಕ್ಷ್ಮಿ , ಮೇಘಾ ಕೆ.ಡಿ , ದಿವ್ಯಾ ಮತ್ತು ಗೃಹರಕ್ಷಕ ಸಿಬ್ಬಂದಿಗಳು ಉಪಸ್ಥಿತರಿದ್ದರು .

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!