Ad Widget

ಸುಳ್ಯದ ಮಾಜಿ ತಹಶೀಲ್ದಾರ್ ಕೋಚಣ್ಣ ರೈ – ಪುತ್ತೂರಿನ ಅಭಿವೃದ್ದಿಯ ಹರಿಕಾರ ಇನ್ನಿಲ್ಲ

ಸುಳ್ಯದ ಮಾಜಿ ತಹಶೀಲ್ದಾರ್ ಪುತ್ತೂರಿನ ಚಿಲ್ಮೆತ್ತಾರು ಕೋಚಣ್ಣ ರೈ (85) ಇಂದು ಮಂಗಳೂರಿನಲ್ಲಿ ನಿಧನರಾದರು. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಮಂಗಳೂರಿನಲ್ಲಿ ಮಗನ ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು.
ಮೃತರು ಪುತ್ರಿಯರಾದ ವಿಜಯ ಹಾಗು ಸುಜಯ, ಪುತ್ರ ಮಂಗಳೂರಿನಲ್ಲಿ ದಂತ ವೈದ್ಯರಾಗಿರುವ ಡಾ| ಮಂಜುನಾಥ್‌ ಹಾಗೂ ಅಪಾರ ಬಂಧು ಮಿತ್ರರೂ ಅಭಿಮಾನಿಗಳನ್ನು ಆಗಲಿದ್ದಾರೆ. ಕೋಚಣ ರೈಯವರಪತ್ನಿ ದಿ.ಬೊಂಡಾಲಗುತ್ತು ಸುಗುಣ ರೈ. ಕೋಚಣರೈ ಅವರನ್ನು ವಿವಿಧ ಸಂಘ ಸಂಸ್ಥೆಗಳು ಪ್ರಶಸ್ತಿ ಬಿರುದು ಬಾವಲಿ ನೀಡಿ ಗೌರವಿಸಿದೆ.

. . . . . . . . .

ತಮ್ಮ ಅಧಿಕಾರವಧಿಯಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅರ್ಹವಾದ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಟ್ಟ ಹೆಗ್ಗಳಿಕೆ ಕೋಚಣ್ಣ ರೈ ಅವರದು , ಬೆಳ್ತಂಗಡಿಯಲ್ಲಿ ಸಾವಿರಾರು ದೀನ ದಲಿತರಿಗೆ ಅತ್ಯಂತ ಸುಲಭವಾಗಿ ಹಾಗೂ ಸುಲಲಿತವಾಗಿ ನಿವೇಶನದ ಹಕ್ಕು ಪತ್ರವನ್ನು ಒದಗಿಸಿದವರು ಇವರು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ 14 ಎಕ್ರೆ ಜಾಗವನ್ನು ತನ್ನ ವಿಶೇಷಾಧಿಕಾರದಿಂದ ನೀಡಿದ್ದಾರೆ. ಮೊಟ್ಟೆತ್ತಡ್ಕದಲ್ಲಿ ಗೇರು ಸಂಶೋಧನ ಕೇಂದ್ರಕ್ಕೆ 36 ಎಕ್ರೆ ಜಾಗ, ಪುತ್ತೂರಿಗೆ ಬೈಪಾಸ್ ರಸ್ತೆಯ ಸೌಲಭ್ಯ, ಬಿರುಮಲೆ ಬೆಟ್ಟದ ಅಭಿವೃದ್ಧಯ ಹರಿಕಾರನಾಗಿ ಪುತ್ತೂರಿನ ಸಮಗ್ರ ಅಭಿವೃದ್ದಿಗೆ ದಿಕ್ಕು ಕಲ್ಪಿಸಿದವರು.

. . . . . . .

ಅಭಿವೃದ್ದಿಯ ಹರಿಕಾರ
ಮೂಲತಃ ಪುತ್ತೂರು ತಾಲೂಕಿನ ಚಿಲ್ಮೆತ್ತಾರು ನಿವಾಸಿಯಾಗಿರುವ ಕೋಚಣ್ಣ ರೈ, 1980-81ರಲ್ಲಿ ಪುತ್ತೂರಿನ ತಹಸೀಲ್ದಾರರಾಗಿ ಸೇವೆ ಸಲ್ಲಿಸಿದವರು. ಅವರ ಸೇವಾವಧಿಯಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಅದ ಮುಂಭಾಗದ ವಿಶಾಲ ಗದ್ದೆ ಸೇರ್ಪಡೆಗೊಂಡಿತ್ತು. ಅಲ್ಲದೇ ಅವರ ಅವಧಿಯಲ್ಲಿ ಬಿರುಮಲೆ ಗುಡ್ಡಯ ಅಭಿವೃದ್ಧಿ ಹಾಗೂ ಬೈಪಾಸ್ ರಸ್ತೆ ನಿರ್ಮಾಣದ ನೀಲಿ ನಕಾಶೆ ತಯಾರಾಗಿತ್ತು. ಇಂದು ನಾವು ಪುತ್ತೂರಿನಲ್ಲಿ ಕಾಣುವ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ವಿಶಾಲ ಪ್ರದೇಶ , ಹಚ್ಚಹಸುರಿನ ಪ್ರವಾಸಿ ತಾಣವಾದ ಬಿರುಮಲೆ ಗುಡ್ಡ ಪುತ್ತೂರಿನ ಬೈಪಾಸ್ ರಸ್ತೆ ಹಾಗೂ ಮೊಟ್ಟೆತ್ತಡ್ಕದಲ್ಲಿ ಗೇರು ಸಂಶೋಧನ ಕೇಂದ್ರ ಕೋಚಣ್ಣ ರೈ ಯವರ ದೂರದೃಷ್ಟಿಯ ಯೋಜನೆಗಳು.

1980ರ ದಶಕದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ಸುಮಾರು 14 ಎಕರೆ ಜಮೀನು ಒಕ್ಕಲು ಮಸೂದೆ ಅನ್ವಯ ಹಿಂದು ಹಾಗೂ ಹಿಂದುಯೇತರ ಒಕ್ಕಲುದಾರರ ಕೈಯಲ್ಲಿದ್ದು ಹಡಿಲು ಬಿದ್ದಿತ್ತು. ಚಿಲ್ಮೆತ್ತಾರು ಕೋಚಣ್ಣ ರೈ ಪುತ್ತೂರಿನ ತಹಸೀಲ್ದಾರರಾಗಿದ್ದ ಸಂದರ್ಭ ದೇವಸ್ಥಾನಕ್ಕೆ ಸಂಬಂಧಿಸಿದ ಈ 14 ಎಕರೆ ಜಮೀನನ್ನು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕಾಗಿ ಭೂ ಸ್ವಾಧೀನಪಡಿಸಿಕೊಂಡಿದ್ದರು. ಇಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ವಿಶಾಲ ರಥಬೀದಿ, ಕಂಬಳಗದ್ದೆ ಸೇರಿದಂತೆ 14 ಎಕರೆ ಜಮೀನು ದೇವಸ್ಥಾನದ ಅಧೀನದಲ್ಲಿದೆ ಎಂದಾದರೆ ಇದಕ್ಕೆ ಮೂಲ ಕಾರಣ ಚಿಲ್ಮೆತ್ತಾರು ಕೋಚಣ್ಣ ರೈಯವರ ಅಂದಿನ ದೃಢ ನಿರ್ಧಾರ.

80 ರ ದಶಕದಲ್ಲಿ ಪುತ್ತೂರಿನ ಅತೀ ಎತ್ತರ ಹಾಗು ಸುಂದರ ಪ್ರದೇಶ ಬಿರುಮಲೆ ಗುಡ್ಡ ನಿರಂತರ ಅತಿಕ್ರಮಣಗೊಳ್ಳಗುತಿತ್ತು, ಇದನ್ನು ಅತಿಕ್ರಮಣಗೊಳಿಸದಂತೆ ತಡೆದು ಸುಂದರ ಉದ್ಯಾನವನ, ಬೆಟ್ಟ ಅಭಿವೃದ್ಧಿ ಹಾಗೂ ಬಿರುಮಲೆ ಗುಡ್ಡವನ್ನು ಪ್ರವಾಸಿ ತಾಣವನ್ನಾಗಿಸಲು ಮಾಡಲು ಚಿಲ್ಮೆತ್ತಾರು ಕೋಚಣ್ಣ ರೈ ನಿರ್ಧಾರವೇ ಕಾರಣ. ಮಾಣಿ-ಮೈಸೂರು ಹೆದ್ದಾರಿ ಹಾದು ಹೋಗುವ ಪುತ್ತೂರಿನ ಬೈಪಾಸ್ ರಸ್ತೆ ಕೋಚಣ್ಣ ರೈ ಗಳ ಕನಸಿನ ಕೂಸು. ಇಂದು ನಾವು ಟ್ರಾಫಿಕ್ ಒತ್ತಡವಿಲ್ಲದೆ ಸಲೀಸಾಗಿ ಬೈಪಾಸ್ ಮೂಲಕ ಹೋಗುತ್ತಿದ್ದೇವೆಂದಾದರೆ ಅದಕ್ಕೆ ಕಾರಣ ಕೋಚಣ್ಣ ರೈಗಳು.

ಮೊಟ್ಟೆತ್ತಡ್ಕದಲ್ಲಿರುವ ಗೇರು ಸಂಶೋಧನ ಕೇಂದ್ರಕ್ಕೆ ಅವರು 36 ಎಕ್ರೆ ಜಾಗವನ್ನು ಕೊಡುವ ಮೂಲಕ ಪುತ್ತೂರಿನ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರವಹಿಸಿದರು. ಕೇಂದ್ರ ಸರಕಾರದ ಈ ಸಂಸ್ಥೆ ಪುತ್ತೂರಿನಲ್ಲಿ ಕಾರ್ಯರಂಭಿಸುವ ಮೂಲಕ ಪುತ್ತೂರಿನ ಪ್ರತಿಷ್ಟೆ ಹತ್ತೂರಲ್ಲು ಹೆಚ್ಚಲು ಇವರ ಪಾತ್ರ ಗಣನೀಯವಾದದ್ದು.

ಈ ಕಾರಣಕ್ಕಾಗಿ ಪುತ್ತೂರು ನಿರ್ಮಾತೃ ಹಾಗೂ ಗಾಂಧಿವಾದಿ ಚಿಲ್ಮೆತ್ತಾರು ಕೋಚಣ್ಣ ರೈ ಹೆಸರನ್ನು ದರ್ಬೆ ವೃತ್ತಕ್ಕೆ ನಾಮಕರಣ ಮಾಡುವಂತೆ ಸಮಾನಮನಸ್ಕರ ತಂಡವೊಂದು ಪುತ್ತೂರು ನಗರಸಭೆಗೆ ಶಿಫಾರಸ್ಸು ಮಾಡಿತ್ತು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading