ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋದ ಚಿತ್ತ ಯೋಜನೆಯಡಿಯಲ್ಲಿ ಸದಸ್ಯರ ಹೃದಯ ಶಸ್ತ್ರಚಿಕಿತ್ಸೆಗೆ ಸಹಾಯಧನ ವಿತರಣೆ ಮಾ. 26 ರಂದು ನಡೆಯಿತು. ಫಲಾನುಭವಿಗಳಾದ ಎ.ವಿ. ಜಯರಾಮ ಚೆಂಬು ಮತ್ತು ಶರಣ್ ಕುಮಾರ ಬಿ.ಜೆ. ಕರಿಕೆ ಇವರಿಗೆ ತೆರದ ಹೃದಯ ಶಸ್ತ್ರಚಿಕಿತ್ಸೆಗೆ ಸಹಾಯಧನ ತಲಾ ರೂ.50000 ದ ಚೆಕ್ ನ್ನು ಸಂಸ್ಥೆಯ ನಿರ್ದೇಶಕರಾದ ಕೃಷ್ಣ ಪ್ರಸಾದ ಮಡ್ತಿಲರವರು ಕ್ಯಾಂಪ್ಕೋ ಸುಳ್ಯ ಶಾಖೆಯಲ್ಲಿ ವಿತರಿಸಿದರು. ಈ ಸಂದರ್ಭದಲ್ಲಿ ಸುಳ್ಯ ಶಾಖಾ ವ್ಯವಸ್ಥಾಪಕರಾದ ಪ್ರದೀಪ್ ಕುಮಾರ್, ಶಾಖೆಯ ಮುಖ್ಯ ಸಿಬ್ಬಂದಿ ಮಲ್ಲಿಕಾ, ಮತ್ತಿತರರು ಉಪಸ್ಥಿತರಿದ್ದರು.
- Friday
- November 1st, 2024