ಸುಳ್ಯ ತಾಲೂಕಿನ ಪ್ರತಿಷ್ಠಿತ ಅಬ್ದು ರಿಯಾಜ್ ಜುಮ್ಮಾ ಮಸೀದಿ ಎಲಿಮಲೆಯ ಬದ್ರಿಯ ಜಮಾಅತ್ ಸಮಿತಿಯ ಅಧ್ಯಕ್ಷರಾಗಿ ಐ. ಕೆ. ಮಹಮ್ಮದ್ ಇಕ್ಬಾಲ್ ಎಲಿಮಲೆ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆ ಗೊಂಡಿರುತ್ತಾರೆ.
ಎಲಿಮಲೆ ಜುಮ್ಮಾ ಮಸೀದಿಯ ಸಭಾಂಗಣದಲ್ಲಿ ಮಾ. 25 ರಂದು ನಡೆದ ಸರ್ವಸದಸ್ಯರ ಸಭೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಐ. ಕೆ. ಮಹಮ್ಮದ್ ಇಕ್ಬಾಲ್ ಎಲಿಮಲೆ, ಉಪಾಧ್ಯಕ್ಷರಾಗಿ ಪಿ. ಎಚ್. ಯೂಸುಫ್ ಪಾಣಾಜೆ, ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಎಂ .ಎಚ್.( ಹನೀಪ ಮೆತ್ತಡ್ಕ), ಖಜಾಂಚಿಯಾಗಿ ಮಹಮೂದ್ ವೈ.ಎಂ., ಆಡಳಿತ ಸಮಿತಿ ಸದಸ್ಯರಾಗಿ ಜಿ ಅಬೂಬಕ್ಕರ್ ಸಿದ್ದೀಕ್ ಜಿರ್ಮುಕ್ಕಿ, ಪಿ ಎಚ್ ಅಬೂಬಕ್ಕರ್ ಪಾಣಾಜೆ, ಹಾಜಿ ಜಿ.ಮೂಸ ಕುಂಞಿ ಜಿರ್ಮುಖಿ.ಯೂ. ಎಂ. ಹೈದರ್ ಹಾಜಿ ಬಟ್ರಬೈಲ್. ವೈ, ಎ .ಬಶೀರ್, ಅಬ್ದುಲ್ ಲತೀಫ್ ಹರ್ಲಡ್ಕ, ಮಹಮ್ಮದ್ ಕುನ್ಜಿ(ಹನೀಫ್ ಜಿರ್ಮುಕ್ಕಿ)ಇವರು ಆಯ್ಕೆ ಗೊಂಡಿರುತ್ತಾರೆ.