ಅರಂತೋಡು-ತೊಡಿಕಾನ ಪ್ರಾಕೃ.ಪ.ಸ.ಸಂಘ ನಿಯಮಿತದ ವತಿಯಿಂದ ಬೆಳ್ತಂಗಡಿ ರಬ್ಬರ್ ಬೆಳೆಗಾರರ ಮತ್ತು ಮಾರಾಟಗಾರರ ಸಹಕಾರ ಸಂಘ ನಿ. ಉಜಿರೆ ಇದರ ಸಹಭಾಗಿತ್ವದಲ್ಲಿ ರಬ್ಬರ್ ಖರೀದಿ ಕೇಂದ್ರ ಹಾಗೂ ಗಣೇಶ್ ಕ್ಯಾಶ್ಯೂಸ್ ಅಡ್ಕಾರ್ ಸಹಕಾರದೊಂದಿಗೆ ಗೇರು ಬೀಜ ಖರೀದಿ ಕೇಂದ್ರ ಮಾ.23 ರಂದು ಶುಭಾರಂಭಗೊಂಡಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಪಿಲಿ ರವರು ನೆರವೇರಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಹರಿಣಿ ದಿನೇಶ್ ದೇರಾಜೆರವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪ್ರಗತಿಪರ ಕೃಷಿಕರು, ಸಂಘದ ನಿರ್ದೇಶಕರೂ ಆಗಿರುವ ಚಂದ್ರಶೇಖರ ಜೋಡಿಪಣೆರವರು ಪ್ರಥಮ ಗ್ರಾಹಕರಾಗಿ ಸಹಕರಿಸಿದರು.
ಸಂಘದ ಉಪಾಧ್ಯಕ್ಷರಾದ ದಯಾನಂದ ಕುರುಂಜಿ, ನಿರ್ದೇಶಕರಾದ ವಿನೋದ್ ಉಳುವಾರು, ಕುಸುಮಾಧರ ಅಡ್ಕಬಳೆ, ಸಂತೋಷ್ ಚಿಟ್ಟನ್ನೂರು, ನಿಧೀಶ್ ಅರಂತೋಡು, ಕೇಶವ ಆಡ್ತಲೆ, ವಿಜೇತ್ ಮರುವಳ, ಚಿತ್ರಾ ಶಶಿಧರ ದೇರಾಜೆ, ತೋಟಂಪಾಡಿ ಶ್ರೀ ಉಳ್ಳಾಕುಲು ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾಗಿರುವ ಮೇದಪ್ಪ ಉಳುವಾರು, ಹಾಗೂ ಸಂಘದ ಸದಸ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ ಸ್ವಾಗತಿಸಿ ಮುಖ್ಯಕಾರ್ಯನಿರ್ವಹಣಾಧಿಕಾರಿ ವಾಸುದೇವ ನಾಯಕ್ ವಂದಿಸಿದರು.