Ad Widget

ಭಾರತ ಅಥವಾ ಹಿಂದುಸ್ಥಾನ ಎಂದು ಬದಲಾಯಿಸುಂತೆ ಸುಪ್ರೀಂಕೋರ್ಟ್ ಗೆ ಅರ್ಜಿ

ನವದೆಹಲಿ : ಸಂವಿಧಾನವನ್ನು ತಿದ್ದುಪಡಿ ಮಾಡಿ ” ಇಂಡಿಯಾ ” ಎಂಬ ಹೆಸರನ್ನು ” ಭಾರತ ” ಅಥವಾ ” ಹಿಂದೂಸ್ಥಾನ ” ಎಂದು ಬದಲಾಯಿಸಲು ಕೇಂದ್ರಕ್ಕೆ ನಿರ್ದೇಶನ ಕೋರಿರುವ ಮನವಿಯನ್ನು ಜೂನ್ 2 ರಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲು ಸಮ್ಮತಿಸಿದೆ . ” ಒಕ್ಕೂಟದ ಹೆಸರು ಮತ್ತು ಭೂಪ್ರದೇಶದೊಂದಿಗೆ ವ್ಯವಹರಿಸುವ ಸಂವಿಧಾನದ 1 ನೇ ಪರಚ್ಚೇಧದ ತಿದ್ದುಪಡಿ ತರಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶಿಸಲು ಮನವಿಯಲ್ಲಿ ಕೋರಲಾಗಿದೆ.ನಮ್ಮದೇ ರಾಷ್ಟ್ರೀಯತೆಯಲ್ಲಿ ಹೆಮ್ಮೆಯ ಭಾವವನ್ನು ಮೂಡಿಸುವಂತೆ ” ಇಂಡಿಯಾ ” ಎನ್ನುವ ಬದಲು ” ಬಾರತ ” ಅಥವಾ ” ಹಿಂದೂಸ್ಥಾನ ” ಎಂದು ದೇಶವನ್ನು ಸಂಬೋಧಿಸುವಂತೆ ಮನವಿಯಲ್ಲಿ ಕೇಳಿದೆ . ಶುಕ್ರವಾರ ಈ ಅರ್ಜಿ ಸುಪ್ರೀಂ ಕೋರ್ಟ್ ಮುಂದೆ ಬಂದಿದ್ದು ಭಾರತದ ಮುಖ್ಯ ನ್ಯಾಯಮೂರ್ತಿ ( ಸಿಜೆಐ ) ಎಸ್ ಎ ಬೊಬ್ಬೆ ಲಭ್ಯವಿಲ್ಲದ ಕಾರಣ ಅದನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ.ಸರ್ವೋಚ್ಚ ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ ನೋಟಿಸ್‌ನ ಪ್ರಕಾರ , ಈ ವಿಷಯವನ್ನು ಜೂನ್ 2 ರಂದು ಸಿಜೆಐ ನೇತೃತ್ವದ ನ್ಯಾಯಪೀಠದ ಮುಂದೆ ವಿಚಾರಣೆಗೆ ಪಟ್ಟಿ ಮಾಡಲಾಗುವುದು . ದೆಹಲಿ ಮೂಲದ ವ್ಯಕ್ತಿಯೊಬ್ಬರು ಸಲ್ಲಿಸಿರುವ ಮನವಿಯಲ್ಲಿ , ಇಂತಹ ತಿದ್ದುಪಡಿಯು ” ಈ ದೇಶದ ನಾಗರಿಕರು ವಸಾಹತುಶಾಹಿ ಭೂತಕಾಲದಿಂದ ಹೊರಬರುವುದನ್ನು ಖಚಿತಪಡಿಸಲಿದೆ ” ಎಂದು ಹೇಳಿದ್ದಾರೆ .

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!