ಕರಿಕೆ ಸಮೀಪದ ಚೆತ್ತುಕಾಯ ಎಂಬಲ್ಲಿ ಮೀಸಲು ಅರಣ್ಯದಿಂದ ಕಾಡು ಪ್ರಾಣಿಗಳನ್ನು ಬೇಟೆಯಾಡಿದ ಆರೋಪದ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ನಾಲ್ಕು ಜನ ನುರಿತ ಬೇಟೆಗಾರರನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಪ್ರಭಾಕರನ್ ಮಾರ್ಗದರ್ಶನ ದಲ್ಲಿ ವಲಯ ಅರಣ್ಯ ಅಧಿಕಾರಿ ದೇವರಾಜ್ ನೇತ್ರತ್ವದ ತಂಡ ಖಚಿತ ಮಾಹಿತಿಯ ಮೇರೆಗೆ ದಾಳಿನಡೆಸಿ ಕೆ.ಸಿ.ಸುಂದರ,ಪಿ.ಕೆ.ರಾಮ,ಜೋಷಿ ಜಾರ್ಜ್, ಎಂ.ಆರ್.ಕ್ರಷ್ಣನ್ ಎಂಬ ನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ದು ಬಂಧಿತರಿಂದ ಮತ್ತೋರ್ವ ಆರೋಪಿ ಕೆ.ಕೆ.ನಿರ್ಮಾಲನಂದ ಅವರಿಗೆ ಸೇರಿದ ಒಂಟಿ ನಳಿಕೆ ಕೋವಿ ಹಾಗೂ ಬೇಟೆಯಾಡಿದ ಕೆಂಜಳಿಲು,ಮುಷ್ಯ ಸೇರಿದಂತೆ ಇತರೆ ವನ್ಯಪ್ರಾಣಿಗಳ ಮಾಂಸವನ್ನು ವಶಪಡಿಸಿಕೊಂಡಿದ್ದು,ಐದು ಜನರ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಕಲಂ 9,39,44 51,,55, ರ ಪ್ರಕಾರ ಪ್ರಕರಣ ದಾಖಲಿಸಿ ನಾಲ್ವರು ಆರೋಪಿಗಳನ್ನು ನ್ಯಾಯಂಗ ಬಂದನಕ್ಕೆ ಒಪ್ಪಿಸಿದ್ದು ಮತ್ತೋರ್ವ ತಲೆಮರೆಸಿಕೊಂಡಿದ್ದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.ಬಂಧಿತರಲ್ಲಿ ಪ್ರಥಮ ಆರೋಪಿಯಾದ ಸುಂದರ ಎಂಬಾತನ ಮೇಲೆ ಎರಡು ವರ್ಷಗಳ ಹಿಂದೆ ತಲಕಾವೇರಿ ವನ್ಯದಾಮದ ಸರಹದ್ದಿನ ಅರಣ್ಯ ಪ್ರದೇಶದಲ್ಲಿ ಸಿಂಗಳಿಕ ಭೇಟೆಯಾಡಿದ ಪ್ರಕರಣದ ಹಿನ್ನಲೆ ಮಾಂಸ ಹಾಗು ಜೋಡುನಳಿಕೆ ಬಂದೂಕನ್ನು ವಶಪಡಿಸಿ ಪ್ರಕರಣ ದಾಖಲು ಮಾಡಿದ್ದರು.( ಚಿತ್ರ: ಫೈಲ್)
- Sunday
- November 24th, 2024