Ad Widget

ರಾಜ್ಯ ಮಟ್ಟದ ಕಲಾಸಿರಿ ರತ್ನ ಬಿರುದು ಮುಡಿಗೇರಿಸಿಕೊಂಡ ಸುಳ್ಯದ ಶುಭದಾ ಆರ್ ಪ್ರಕಾಶ್

ಹುಟ್ಟೂರಲ್ಲಿ ತನ್ನ ಕೋಗಿಲೆಯ ಕಂಠದಿಂದ ಮೋಡಿ ಮಾಡಿದ ಗಾಯಕಿ ಶುಭದಾ ಸರಿಗಮಪ ವೇದಿಕೆಯ ಮೂಲಕ ತನಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಹಲವಾರು ಕಾರ್ಯಕ್ರಮದಲ್ಲಿ ತನ್ನ ಮಾಧುರ್ಯ ಭರಿತ ಸ್ವರದಲ್ಲಿ ಅನೇಕ ಅಭಿಮಾನಿಗಳ ಹೃದಯವನ್ನು ಗೆದ್ದ ಸುಳ್ಯದ ಶುಭದಾ ಆರ್ ಪ್ರಕಾಶ್ ಇವರಿಗೆ ಕರ್ನಾಟಕ ಜನಸ್ಪಂದನ ಟ್ರಸ್ಟ್ ಕರ್ನಾಟಕ ರಾಜ್ಯ ಸಂಸ್ಥೆ ಟೀ ದಾಸರ ಹಳ್ಳಿ ಬೆಂಗಳೂರು ಇವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ 5ನೇ ವರ್ಷದ ಟ್ರಸ್ಟ್ ನ ವಾರ್ಷಿಕೋತ್ಸವದ ಪ್ರಯುಕ್ತ ಸಾಂಕೃತಿಕ,
ಸಂಗೀತ, ನೃತ್ಯ, ನಾಟಕ, ಭರತನಾಟ್ಯ, ಹಾಗೇಯೆ ಹಲವು ಕೇತ್ರಗಳಲ್ಲಿ ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡ ಶುಭದಾ ಅವರಿಗೆ ಕಲಾಸಿರಿ ರತ್ನ ಬಿರುದು ನೀಡಿ ಸನ್ಮಾನಿಸಿದರು.

. . . . .

ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ವಿದ್ವಾನ್ ಕಾಂಚನ ಈಶ್ವರ ಭಟ್ ರವರ ಮಾರ್ಗದರ್ಶನದಲ್ಲಿ ಜೂನಿಯರ್ ಗ್ರೇಡ್ ಮಾಡಿ ಸೀನಿಯರ್ ಮಾಡುತ್ತಿದ್ದಾರೆ. ಭರತನಾಟ್ಯದಲ್ಲಿ ಜೂನಿಯರ್ ಗ್ರೇಡ್ ಡಿಸ್ಟಿಂಕ್ಷನ್ ಪಡೆದಿದ್ದು, ಚಿತ್ರಕಲೆಯಲ್ಲಿ ಜೂನಿಯರ್ ಮತ್ತು ಸೀನಿಯರ್ ಗ್ರೇಡ್ ನಲ್ಲಿ ಡಿಸ್ಟಿಂಕ್ಷನ್ ಪಡೆದಿರುತ್ತಾರೆ.
ರಾಜ್ಯಮಟ್ಟದ ಹಲವಾರು ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಗಳಿಸಿರುತ್ತಾರೆ. ಗಡಿನಾಡ ಧ್ವನಿ ಕಲಾಭೂಷಣ ರಾಜ್ಯ ಪ್ರಶಸ್ತಿ, ಜ್ಞಾನ ಮಂದಾರ ಅರಳುಮಲ್ಲಿಗೆ ರಾಜ್ಯ ಪ್ರಶಸ್ತಿ, ತುಳುನಾಡ ಗಾನಕೋಗಿಲೆ ರಾಜ್ಯಪ್ರಶಸ್ತಿ, ಜೆ ಸಿ ಐ ಕಲಾಶ್ರೀ ಪ್ರಶಸ್ತಿ, ರೋಟರಿ ಬಾಲಪ್ರತಿಭೆ ಪುರಸ್ಕಾರ, ಸ್ವರ ಮಂದಾರ ರಾಜ್ಯಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಶುಭದ ಆರ್ ಪ್ರಕಾಶ್ ಪಡೆದಿರುತ್ತಾರೆ.
ತನ್ನ ಕಲೆಗೆ ಯಾವುದೇ ಎಲ್ಲೆಯಿಲ್ಲ ಅನ್ನೋದನ್ನ ತೋರಿಸಿ ಕೊಟ್ಟಿದ್ದಾಳೆ. ಆಂಧ್ರಪ್ರದೇಶದಲ್ಲಿ ಅಭಿಮಾನಿ ಬಳಗವನ್ನು ಹೊಂದಿ ಇಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಅದ್ಭುತ ಕಂಠದ ಮೂಲಕ ಮಿಂಚಿ , ದಕ್ಷಿಣ ಕನ್ನಡದ ಸುಳ್ಯ ತಾಲೂಕಿಗೆ ಕೀರ್ತಿಯನ್ನು ತಂದು ಕೊಟ್ಟಿದ್ದಾಳೆ. ಜೀ ಕನ್ನಡ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 16ರ ಜನಮೆಚ್ಚುಗೆ ಪಡೆದ ಸ್ಪರ್ಧಿ. ಈಕೆ ಸುಳ್ಯದ ಸೂರ್ತಿಲ ನಿವಾಸಿ ಪೆರಾಜೆ ಸೊಸೈಟಿ ಉದ್ಯೋಗಿ ರವಿಪ್ರಕಾಶ್ ಸಿ ಪಿ. ಮತ್ತು ಜಯಶ್ರೀ ಆರ್ ಪ್ರಕಾಶ್ ರವರ ಪುತ್ರಿ. ಸುಳ್ಯದ ಅಮರ ಜ್ಯೋತಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!