Ad Widget

ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಸುಳ್ಯಕ್ಕೆ ಭೇಟಿ – ನೌಕರರೊಂದಿಗೆ ಸಂವಾದ ಮತ್ತು ಸನ್ಮಾನ ಕಾರ್ಯಕ್ರಮ

ಸುಳ್ಯ ತಾಲೂಕು ಪಂಚಾಯತ್ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ ಎಸ್ ಷಡಾಕ್ಷರಿಂದ ನೌಕರರೊಂದಿಗೆ ನೇರ ಸಂವಾದ ಕಾರ್ಯಕ್ರಮ ಮತ್ತು ಸನ್ಮಾನ ಕಾರ್ಯಕ್ರಮ ಮಾ.11 ರಂದು ನಡೆಯಿತು. ಕಾರ್ಯಕ್ರಮವನ್ನು ಸಿ ಎಸ್ ಷಡಾಕ್ಷರಿ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ತೀರ್ಥರಾಮ ಹೊಸೊಳಿಕೆ ವಹಿಸಿದ್ದರು. ವೇದಿಕೆಯಲ್ಲಿ ತಾಲೋಕು ದಂಡಾಧಿಕಾರಿ ಕು.ಅನಿತಾಲಕ್ಷ್ಮಿ, ತಾಲೂಕು ವೈದ್ಯಾದಿಕಾರಿ ಡಾ. ನಂದಕುಮಾರ್, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಎನ್ ಭವಾನಿಶಂಕರ, ತಾಲೂಕು ಸರಕಾರಿ ನೌಕರ ಉಪಾಧ್ಯಕ್ಷ ಬಸವರಾಜ್, ಕಾರ್ಯದರ್ಶಿ ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವ, ತಾಲೂಕು ಘಟಕದ ದನಲಕ್ಷ್ಮಿ, ರಾಜ್ಯ ಪರಿಷತ್ ಸದಸ್ಯ ಪೃಥ್ವಿರಾಜ್ ಮೊದಲಾದವರಿದ್ದರು. ಕಾರ್ಯಕ್ರಮದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದಿಂದ ಷಡಾಕ್ಷರಿಯವರನ್ನು ಸನ್ಮಾನಿಸಲಾಯಿತು, ಕಾರ್ಕ್ರಕ್ರಮದಲ್ಲಿ ಮಾತನಾಡಿದ ಷಡಾಕ್ಷರಿ, ಸರಕಾರಿ ನೌಕರರ ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ, ಸುಳ್ಯದಲ್ಲಿ ಸರ್ಕಾರಿ ನೌಕರರ ಸಂಘ ಸದೃಢವಾಗಿದೆ, ಈಗ ರಾಜ್ಯದಲ್ಲಿ ಮುಂಬಡ್ತಿಗೆ ಅವಕಾಶ ಕಲ್ಪಿಸಲಾಗಿದೆ . ಅಲ್ಲದೆ ಕೇವಲ ಏಳು ದಿನಗಳಲ್ಲಿ ಮೂರು ಲಕ್ಷದಷ್ಟು ಸಾಲವನ್ನು ಸುಲಭವಾಗಿ ಪಡೆಯಲು ಅವಕಾಶ ಮಾಡಲಾಗಿದೆ ಎಲ್ಲವೂ ಡಿಜಿಟಲೀಕರಣ ಮಾಡಲಾಗಿದೆ, ಮೊಟ್ಟ ಮೊದಲ ಬಾರಿಗೆ ಕರ್ನಾಟಕದಲ್ಲಿ ಇದೆಲ್ಲಾ ಜಾರಿಗೆ ಬರಲಿದೆ. ಮುಂದಿನ ತಿಂಗಳಿಂದ ಉಚಿತ ವೈದ್ಯಕೀಯ ಸೇವೆಯನ್ನು ಸರಕಾರಿ ನೌಕರರಿಗೆ ಒದಗಿಸಲು ಸಂಘಟನೆ ನಿರ್ಧರಿಸಿದೆ , ರಾಜ್ಯ ಸರಕಾರಿ ನೌಕರಿಗೆ ಸವಾಲ್ ಇದೆ ನಿಜ, ವೇತನ ಪರಿಷ್ಕರಣೆಯ ಅವಶ್ಯಕತೆ ಇದೆ ಎಲ್ಲರಿಗೂ ಕೇಂದ್ರ ಮಾದರಿಯ ವೇತನ ಅವಶ್ಯಕತೆ ಇದೆ ಎಂದು ಹೇಳಿದರಲ್ಲದೇ, ಖಾಲಿ ಇರುವ ನೌಕರಿಗಳಿಗೆ ನೇಮಕಾತಿ ಮಾಡಲು ಸರಕಾರಕ್ಕೆ ಈಗಾಗಲೇ ಮನವಿ ಮಾಡಲಾಗಿದೆ ಎಂದರು. ತೀರ್ಥರಾಮ ಸ್ವಾಗತಿಸಿ, ದನಲಕ್ಷ್ಮಿ ವಂದಿಸಿದರು. ವಸಂತ ಏನೆಕಲ್ಲು ಕಾರ್ಯಕ್ರಮ ನಿರೂಪಿಸಿದರು.

. . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!