ಪುತ್ತೂರಿನಲ್ಲಿ ಅಂಚೆ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ಕೇನ್ಯ ಗ್ರಾಮದ ಕಣ್ಮಲ್ ಮನೆತನದ ಆನಂದ ಗೌಡ ಚೆನ್ನಕಜೆ ಮತ್ತು ಸಾಮೆತ್ತಡ್ಕ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿರು ಶ್ರೀಮತಿ ಮೀಣಾ ಕುಮಾರಿ ದಂಪತಿಯ ಪುತ್ರಿ ಕು. ಅವಿನಾ ಉನ್ನತ ಶಿಕ್ಷಣಕ್ಕಾಗಿ ಮಾ. 10ರಂದು ಇಂಗ್ಲೆಂಡಿಗೆ ತೆರಳಿದ್ದಾರೆ.
ಇವಳು ಎಲ್.ಕೆಜಿ. ಯು.ಕೆ.ಜಿ. ಯನ್ನು ಪಂಜ ಸೈನಿಕ ಶಾಲೆ, 1 ರಿಂದ 4 ಕ್ಷಾನಾಯ ಜ್ಯೋತಿ ಪ್ರಾಥಮಿಕ ಶಾಲೆ, 5ರಿಂದ 7 ಬೆಥನಿ ಶಾಲೆ ಪುತ್ತೂರಿನಲ್ಲಿ ಪೂರೈಸಿ ಹೈಸ್ಕೂಲ್ ವಿದ್ಯಾಭ್ಯಾಸವನ್ನು ಪುತ್ತೂರಿನ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಪೂರೈಸಿರುತ್ತಾರೆ. ನಂತರ ಮಂಗಳೂರಿನ ಸೈಂಟ್ ಆಗ್ನೆಸ್ ಪ.ಪೂ. ಕಾಲೇಜಿನಲ್ಲಿ ಪಿಯುಸಿ ಮುಗಿಸಿ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಬಯೋಟೆಕ್ ವಿಷಯದಲ್ಲಿ ಬಿ.ಎಸ್.ಸಿ ಪದವಿಯನ್ನು ಪಡೆದಿರುತ್ತಾರೆ. ಪ್ರಸ್ತುತ ಇಂಗ್ಲೆಂಡಿನ ಯುನಿವರ್ಸಿಟಿ ಆಫ್ ಲೆಡೀಸ್ ಗೆ ಬಯೋ ಟೆಕ್ ವಿಷಯದಲ್ಲಿ ಎಂ.ಎಸ್.ಸಿ. ಸ್ನಾತಕೋತ್ತರ ಪದವಿಗಾಗಿ ಮಾ. 10ರಂದು ತೆರಳಿದ್ದಾರೆ.